Spread the love

ಧಾರವಾಡ : 8 ಜಿಲ್ಲೆಗಳಿಂದ ಬಂದಂತಹ 356 ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಕ್ರೀಡೆಯ ಮಹತ್ವವನ್ನು ಹೆಚ್ಚಿಸಬೇಕು. ಜಿಮ್ನಾಸ್ಟಿಕ್ ಕ್ರೀಡೆಯಲ್ಲಿ ಸಾಧನೆ ಮೆರೆಯಬೇಕಾದರೆ ಕಠಿಣ ಪರಿಶ್ರಮ, ಶ್ರದ್ಧೆ, ಏಕಾಗ್ರತೆ ಹಾಗೂ ನಿರಂತರ ದೈಹಿಕ ಸಾಮಥ್ರ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಧಾರವಾಡ ಶಹರ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಬಾಲ ಮಾರುತಿ ಸಂಸ್ಥೆ ಕಿಲ್ಲಾ ಧಾರವಾಡಲ್ಲಿ ಇಂದು (ನ.6) ಆಯೋಜಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 14, 17 ವಯೋಮಿತಿಯ ಬಾಲಕ, ಬಾಲಕಿಯರ ರಾಜ್ಯಮಟ್ಟದ ಜಿಮ್ನಾಸ್ಟಿಕ್ಸ್ ಪಂದ್ಯಾವಳಿ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಎಂದು ಜಿಮ್ನಾಸ್ಟಿಕ್ ಕ್ರೀಡೆಯಲ್ಲಿ ಭಾಗವಹಿಸುತ್ತಿರುವ ಎಲ್ಲರಿಗೂ ಶುಭ ಕೋರಿದರು.

ಕಾರ್ಮಿಕ ಸಚಿವರು ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಮಾತನಾಡಿ, ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಹಲವಾರು ದೈಹಿಕ ಕ್ರೀಡೆಗಳು ಇವೆ. ಅದರಲ್ಲಿ ಜಿಮ್ನಾಸ್ಟಿಕ್ ಕ್ರೀಡೆಯೂ ಒಂದಾಗಿದೆ. ವಿದ್ಯಾರ್ಥಿಗಳು ಜಿಮ್ನಾಸ್ಟಿಕ್ ಕ್ರೀಡಾಕೂಟದಲ್ಲಿ ಜಾಗೃತಿಯಿಂದ ಭಾಗವಹಿಸಿ ವಿಜೇತರಾಗಿ ಎಂದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಎಸ್.ಎಂ. ಹುಡೇದಮನಿ ಸ್ವಾಗತಿಸಿದರು.

ಮಕ್ಕಳು ಪ್ರಾಯೋಗಿಕವಾಗಿ ಜಿಮ್ನಾಸ್ಟಿಕ್ ಚಟುವಟಿಕೆಗಳನ್ನು ಸಚಿವರ ಮುಂದೆ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಉಮಾದೇವಿ ಬಸಾಪೂರ, ಅಶೋಕ ಸಿಂದಗಿ, ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಜಿ.ಎನ್.ಮಠಪತಿ, ಧಾರವಾಡ ಶಹರದ ದೈಹಿಕ ಶಿಕ್ಷಣಾಧಿಕಾರಿ ಶಶಿಧರ ಬಸಾಪೂರ ಹಾಗೂ ಎಲ್ಲ ತಾಲೂಕಿನ ದೈಹಿಕ ಶಿಕ್ಷಣಾಧಿಕಾರಿಗಳು, ಜಿಮ್ನಾಸ್ಟಿಕ್ ಕೋಚ್ ಮುರ್ತಗುಡ್ಡೆ, ರಾಜ್ಯ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿಗಳಾದ ಅಲಿ ಗೌರವಾನ್‍ಕೊಳ್ಳ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ಎಸ್.ಎಸ್. ಪಾಟೀಲ, ನ್ಯಾಯವಾದಿಗಳು ಹಾಗೂ ಕಾಂಗ್ರೇಸ್ ಮುಖಂಡರಾದ ಬಿ.ಎಚ್. ನೀರಲಕಟ್ಟಿ, ಬಾಲ ಮಾರುತಿ ಸಂಸ್ಥೆಯ ಅಧ್ಯಕ್ಷರ ಪರವಾಗಿ ಗೋಪಾಲ ಜೋಶಿ ಹಾಗೂ ಶಿಕ್ಷಕರು ಭಾಗವಹಿಸಿದ್ದರು.