Spread the love

 

ಸಂವಿಧಾನ ನಮ್ಮೆಲ್ಲರ ಶಕ್ತಿ ಅಲ್ಲದೇ ಅದು ನಮ್ಮೆಲ್ಲರ ಯಶಸ್ಸು, ಇಂದು ಭಾರತವು ಎಲ್ಲ ರಂಗಗಳಲ್ಲಿ ಯಶಸ್ಸು ಕಂಡಿದೆ ಈ ಯಶಸ್ಸಿಗೆ ಮೂಲ ಕಾರಣವೆ ನಮ್ಮ ಸಂವಿಧಾನ, ಇಂದು ಭಾರತದಲ್ಲಿ ನಾವು ಒಗ್ಗಟ್ಟಾಗಿ ಭಾವೈಕ್ಯತೆಯಿಂದ ಜೀವನ ನಡೆಸುತ್ತದ್ದೇವೆ ಎಂದರೆ ಅದಕ್ಕೆ ಕಾರಣ ಸಂವಿಧಾನ ನಮಗೆ ನೀಡಿರುವ ಹಕ್ಕುಗಳಿಂದ ಎಂದು *ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ.ಗುಡಸಿ* ಹೇಳಿದರು.

 

ಅವರು ಕವಿವಿಯ ಆವರಣದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಪ್ರಯುಕ್ತ ಎಲ್ಲರಿಗೂ ಸಂವಿಧಾನದ ಪ್ರಸ್ತಾವಣೆಯನ್ನು ಭೋದಿಸಿ ಮಾತನಾಡಿದರು.

 

ಕರ್ನಾಟಕ ಸರಕಾರವು ರಾಜ್ಯಾದ್ಯಂತ ಜನೇವರಿ ೨೬ ರಿಂದ ಫೆಬ್ರುವರಿ ೨೫ ರವರೆಗೆ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿರುವ ಪ್ರಯುಕ್ತ ಕರ್ನಾಟಕ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಇಂದು ಸಂವಿಧಾನ ಜಾಗೃತಾ ಜಾಥಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕವಿವಿ ಆವರಣದಲ್ಲಿರುವ ರಸಾಯನಶಾಸ್ತ್ರ ವಿಭಾಗದಿಂದ ಆಡಳಿತ ಕಚೇರಿಯವರೆಗೆ ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆ ನಡೆಸಲಾಯಿತು.

 

ಮೆರವಣಿಗೆಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ. ಪ್ರೊ. ಮಲ್ಲಿಕಾ ಘಂಟಿ, ಕವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ವಾಯ್.ಮಟ್ಟಿಹಾಳ, ಹಣಕಾಸು ಅಧಿಕಾರಿ ಪ್ರೊ.ಸಿ.ಕೃಷ್ಣಮೂರ್ತಿ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ವಿಭಾಗದ ಸಂಯೋಜಕ ಡಾ.ಸುಭಾಷಚಂದ್ರ ನಾಟಿಕಾರ, ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಪ್ರೊ.ಎಸ್.ಕೆ.ಪವಾರ, ಪ್ರೊ.ಬಿ.ಎಚ್.ನಾಗೂರ, ಪ್ರೊ.ರವಿ ಕಾಂಬಳೆ, ಪ್ರೊ.ಶಿಲಾಧರ ಮುಗಳಿ, ಪ್ರೊ. ಸಂಗೀತಾ ಮಾನೆ, ಡಾ.ಶ್ಯಾಮಲಾ ರತ್ನಾಕರ ಸೇರಿದಂತೆ ವಿಶ್ವವಿದ್ಯಾಲಯದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂಧಿ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು