Spread the love


ಧಾರವಾಡ:– ಕರ್ನಾಟಕ ರೋಲರ್ ಸ್ಕೆಟಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ 39 ನೇ ರಾಜ್ಯ ಮಟ್ಟದ ಸ್ಕೆಟಿಂಗ್ ಸ್ಪರ್ಧೆಯು ಇತ್ತೀಚೆಗೆ ಮಂಗಳರಿನಲ್ಲಿ 9ನೇ ನವೆಂಬರ್ ಯಿಂದ 12ನೇ ನವೆಂಬರ್ ವರೆಗೂ ಆಯೋಗಿಸಲಾಗಿತ್ತು.
ಹುಬ್ಬಳ್ಳಿ ರೋಲರ್ ಸ್ಕೆಟಿಂಗ್ ಅಕಾಡೆಮಿಯ ಮಕ್ಕಳಾದ ಗೌಸಿಯಾನಾಜ್ ಮುಲ್ಲಾ (1 ಕಂಚಿನ‌ ಪದಕ), ಸಾನ್ವಿ ಸಾಂಬ್ರಾಣಿ(1 ಕಂಚಿನ ಪದಕ) ಹಾಗೂ ಮೋಹಸೀನ್ ರಾಜಾ ಹೇಬ್ಬಳ್ಳಿ (1 ಕಂಚಿನ ) ಪದಕ ಪಡೆದು ಅತ್ಯುತ್ತಮ
ಸಾಧನೆಗೈದಿದ್ದಾರೆ.
.ಈ ಮಕ್ಕಳಿಗೆ ಅಕ್ಷಯ್ ಸೂರ್ಯವಂಶಿಯವರು ತರಬೇತಿ ನೀಡಿದ್ದು. ಮಕ್ಕಳ ಈ ಸಾಧನೆಯನ್ನು ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿ ಸದಸ್ಯರು , ಪೋಷಕರು, ಧಾರವಾಡ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಅದ್ಯಕ್ಷರು, ಕಾರ್ಯದರ್ಶಿಗಳು ಪ್ರಶಂಸಿಸಿ ಅಭಿನಂದಿಸಿದ್ದಾರೆ .