Spread the love

ಧಾರವಾಡ : ವಿಕಲಚೇತನ ಮಕ್ಕಳ ಸೇವೆ ಮಾಡುವುದು ದೇವರ ಕೆಲಸ ಇಂತಹ ಮಕ್ಕಳನ್ನು ಪ್ರಬುದ್ಧ ಮಟ್ಟಕ್ಕೆ ಬೆಳೆಸಲು ಪ್ರಯತ್ನಿಸುವದರೊಂದಿಗೆ ಮಕ್ಕಳನ್ನು ಅಪೌಷ್ಠಿಕತೆಯಿಂದ ಮುಕ್ತ ಮಾಡಿ ಅವರಿಗೆ ಅವಶ್ಯಕತೆಯಿರುವ ಸಾಧನ ಸಲಕರಣೆಗಳನ್ನು ಕೊಡುವದರ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ನಮ್ಮ ನಿಮ್ಮೆಲ್ಲೆರ ಜವಾಬ್ದಾರಿ ಎಂದು ಧಾರವಾಡ ಕಿರಾಣಿ ವರ್ತಕರ ಸಂಘದ ಮುಖ್ಯ ಕಾರ್ಯದರ್ಶಿಗಳಾದ ಚೇತನ ಅಶ್ವಿಯವರು ಹೇಳಿದರು.
 ಧಾರವಾಡದ ಟಿ.ಸಿ.ಡಬ್ಲು ದಲ್ಲಿ ಎ.ಪಿ.ಡಿ. ಸಂಸ್ಥೆ ಬೆಂಗಳೂರು, ಜಿ.ಎಸ್.ಕೆ. ಬೆಂಗಳೂರು ಹಾಗೂ ಜನಮುಖಿ ಸ್ವಯಂ ಸೇವಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ವಿಕಲಚೇತನ ಮಕ್ಕಳಿಗೆ 6 ಲಕ್ಷ ರೂ.ಗಳ ಉಪಯುಕ್ತ ಸಾಧನ ಸಲಕರಣೆಗಳನ್ನು ವಿತರಿಸಿ ಮಾತನಾಡುತ್ತಾ ಮಕ್ಕಳಿಗೆ ಅವಶ್ಯಕವಿರುವ ಸಾಮಗ್ರಿಗಳನ್ನು ಕೊಟ್ಟಾಗ ಮಕ್ಕಳನ್ನು ಪ್ರಬುದ್ಧ ಮಟ್ಟಕ್ಕೆ ಬೆಳೆಸುವ ಜೊತೆಗೆ ಜೀವನ ಕೌಶಲ್ಯಗಳ ರೂಢಿಸಿ ಸಮಾಜದ ಮುಖ್ಯವಾಹಿನಿಗೆ ತರುವದರ ಜೊತೆಗೆ ಮಾನವೀಯ ಕಳಕಳಿಯಿಂದ ಇಂತಹ ಮಕ್ಕಳ ಸೇವೆ ಮಾಡಬೇಕು. ಈ ನಿಟ್ಟಿನಲ್ಲಿ ಜನಮುಖಿ ಸಂಸ್ಥೆ ಇಂತಹ ಉತ್ತಮ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಅಂಚೆ ಇಲಾಖೆಯ ನಿವೃತ್ತ ಆದಿಕಾರಿಗಳಾದ ರಮೇಶ ದೇವಶೆಟ್ಟಿಯವರು ಮಕ್ಕಳನ್ನುದ್ದೇಶಿಸಿ ಮಾತನಾಡುತ್ತಾ ತಮ್ಮ ಕಾರ್ಯಾವಧಿಯಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೋಂಡಿದ್ದರೂ ಇಂತಹ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಭಾಗವಹಿಸುವ ಸುಸಂದರ್ಭ ಒದಗಿ ಬಂದಿರುವದು ನನಗೆ ಖುಷಿ ತಂದಿದೆ. ಹಾಗೆಯೇ ಪಾಲಕರಿಗೆ ಸರಕಾರದಿಂದ ಒದಗುವ ಅನೇಕ ಉಚಿತ ಸೌರ‍್ಯಗಳನ್ನು ಪಡೆದುಕೊಳ್ಳುವದರೊಂದಿಗೆ ಜನಮುಖಿ ಸಂಸ್ಥೆ & ಏಪಿಡಿ ಸಂಸ್ಥೆಯಿಂದ ಕೊಡುವ ಉಪಯುಕ್ತವಾದ ಸಾಧನ ಸಲಕರಣೆಗಳನ್ನು ಸಮರ್ಪಕ ಬಳಕೆ ಮಾಡಿಕೊಂಡು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ದಾರಿ ಮಾಡಿ ಕೊಡಲು ಕೇಳಿಕೊಂಡರು.
ಇದೇ ಸಂದರ್ಭದಲ್ಲಿ ದಲಿತ ಸೇನಾ ಸಮಿತಿಯ ಸಂಘದ ಅಧಯಕ್ಷರಾದ ಶ್ರೀಮತಿ ರಾಜೇಶ್ವರಿಯವರು ಮಾತನಾಡಿ ವಿಕಲಚೇತನ ಮಕ್ಕಳನ್ನು ಕಡೆಗಣಿಸದೆ ಸಾಮಾನ್ಯ ಮಕ್ಕಳಂತೆ ಅವರನ್ನು ಸಮುದಾಯದ ಮುಖ್ಯ ಭಾಗವೆಂದು ತಿಳಿದು ಸರಕಾರ ಹಾಗೂ ಸಂಘ, ಸಂಸ್ಥೆಗಳು ಪ್ರಾಮಾಣಿಕವಾಗಿ ಕರ‍್ಯ ಮಾಡಿದಾಗ ಇಂತಹ ಮಕ್ಕಳಿಗೆ ವಿಶೇಷ ಕಾಳಜಿಯೊಂದಿಗೆ ಅವರಿಗೆ ಉಪಯುಕ್ತವಾದ ಸಾಧನ ಸಲಕರಣಗಳನ್ನು ವಿವಿಧ ದಾನಿಗಳಿಂದ ಕೊಡಿಸುವದರ ಮುಖಾಂತರ ಒಂದು ಉಪಯುಕ್ತವಾಗುವ ಕಾರ್ಯ ಮಾಡಬೇಕೆಂದು ಕರೆ ಕೊಟ್ಟರು. ಹಿರಿಯ ಪತ್ರಕರ್ತರಾದ ಬಸವರಾಜ್ ಆನೆಗುಂದಿ ಮಾತನಾಡಿ ಸಂಸ್ಥೆಯ ಕಾರ್ಯಕ್ಕ್ ಮೆಚ್ಚುಗೆ ವ್ಯಕ್ತಪಡಿಸಿ. ಬಸವರಾಜ್ ಮ್ಯಾಗೇರಿ ದಂಪತಿಗಳಿಗೆ
 ಅಭಿನಂದಿಸಿದರು.
ಧಾರವಾಡದ ಟಿ.ಸಿ.ಡಬ್ಲೂದಲ್ಲಿ ಉಚಿತ ಪಿಜಿಯೋತೆರೆಪಿ ಕೇಂದ್ರವನ್ನು ಪ್ರಾರಂಬಿಸಿದ್ದು ಈ ಕೇಂದ್ರದಲ್ಲಿ ಬೆಳಗಿನ 11ರಿಂದ 5 ಗಂಟೆಯವರೆಗೆ ಕಾರ್ಯಮಾಡುತ್ತಿದ್ದಾರೆ. ಈ ಸದುಪಯೋಗವನ್ನು ಜಿಲ್ಲೆಯ ವಿಕಲಚೇತನ ಮಕ್ಕಳು ಈಗಾಗಲೇ 200 ಮಕ್ಕಳು ಕೇಂದ್ರಕ್ಕೆ ಬಂದು ಉಪಯೋಗ ಪಡೆದುಕೊಂಡಿದ್ದು ಅದಲ್ಲಿ ಸಾಕಷ್ಟು ಮಕ್ಕಳ ಬೆಳವಣಿಗೆಯನ್ನು ಕಂಡು ಇನ್ನೂ ಹೆಚ್ಚಿನ ರೀತಿಯಲ್ಲಿ ಮಕ್ಕಳು ಬರಲು ಕರೆಕೊಟ್ಟರು. ಈ ಕೇಂದ್ರಕ್ಕೆ ಬರುವ 27 ಮಕ್ಕಳಿಗೆ ಸಾದನ ಸಲಕರಣೆಗಳನ್ನು ಕೊಟ್ಟು ಮತ್ತು ೨೫ ಮಕ್ಕಳಿಗೆ ಮೆಜರ ಮೆಂಟ್ ಕ್ಯಾಂಪನ್ನು ಮಾಡಲಾಯಿತು. ಎಂದು ಬಸವರಾಜ ಮ್ಯಾಗೇರಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎ.ಪಿ.ಸಿ.ಸಂಸ್ಥೆಯ ಸಸ್ಮೀತಾ, ಅವರು ಮಾತನಾಡುತ್ತಾ ೦-೮ ವರ್ಷದ ಒಳಗಿನ ಮಕ್ಕಳಿಗೆ ಯಾವ ರೀತಿಯಲ್ಲಿ ಸಹಾಯ ಸಹಕಾರ ಮತ್ತು ಅವಶ್ಯಕವಿರು ಸಾಮಗ್ರಿಗಳನ್ನು ನಾವು ಅವರನ್ನು ಕರೆಸಿಕೊಂಡು ಮೆಜರಮೆಂಟ್ ಮಾಡಿದಮೇಲೆ ಒಂದು ತಿಂಗಳಲ್ಲಿ ಉಚಿತವಾಗಿ ಸಾಮಗ್ರಿಗಳನ್ನು ಕೊಡಲು ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಈ ಸೌಲಬ್ಯವನ್ನು ಪಡೆದುಕೊಳ್ಳಲು ತಿಳಿಸಿದರು. ಈ ಕಾರ್ಯಕ್ರಮದಲ್ಲಿ
 ದಲಿತ ಸೇನಾ ಸಮಿತಿಯ  ಯುವ ಘಟಕದ ರಾಜ್ಯಾಧ್ಯಕ್ಷ ಶ್ರೀನಿವಾಸ್ ಅವರಳ್ಳಿ ಮೋಹನ ಸಂಕೇಶ್ವರ, ಎಂ.ಎನ್. ಗೌಡರ್, ಮಂಜುನಾಥ ಜಮನಾಳ, ರವಿ, ಸುರೇಕಾ, ಮಡಿವಾಳಯ್ಯ ಹಿರೇಮಠ, ಅಕ್ಷತಾ ಪೂಜಾರ, ಸುಜಾತಾ ನಾಯಕ ಉಪಸ್ಥಿತರಿದ್ದರು. ಈ ಕಾರ್ಯಕ್ರಮ ನಿರೂಪನೆ ಹಾಗೂ ವಂದನಾರ್ಪನೆಯನ್ನು ಶ್ರೀಮತಿ ವಿದ್ಯಾ ಮ್ಯಾಗೇರಿ ನರವೇರಿಸಿದರು.