Spread the love
ಧಾರವಾಡ : ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಕ್ರೀಡಾಪಟುಗಳು 2023-24ನೇ ಸಾಲಿನ ಅತ್ಯುನ್ನತ ಕ್ರೀಡಾಕೂಟಗಳಾದ  ಎಸ್. ಜಿ.ಎಫ್. ಐ ನ 67 ನೇ ರಾಷ್ಟ್ರೀಯ ಶಾಲಾ
ಟೆಕ್ವಾಂಡೋ ಕ್ರೀಡಾಕೂಟ-  2023-24 ರಲ್ಲಿ ಬೆಳ್ಳಿ ಪದಕ ಹಾಗೂ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯಗಳ ಟೇಕ್ವಾಂಡೋ ಕ್ರೀಡಾಕೂಟ 2023-24ರ ಪದಕ ವಿಜೇತ ಕ್ರೀಡಾಪಟುಗಳ  ಜಿಲ್ಲಾ ಟೇಕ್ವಾಂಡೋ ಸಂಸ್ಥೆ ಧಾರವಾಡ ಹಾಗೂ ಕರ್ನಾಟಕ ಕಲಾ ಕಾಲೇಜಿನ ವಿದ್ಯಾರ್ಥಿಯಾದ ಕುಮಾರ. ಸಾಯಿಪ್ರಸಾದ ಪರಪ್ಪ ಕ್ಷಾತ್ರತೇಜ್ ಇವನು ಮಧ್ಯಪ್ರದೇಶ ರಾಜ್ಯದ ಬೇತುಲ್ ನಲ್ಲಿ 31 ಡಿಸೆಂಬರ್ 2023 ರಿಂದ 5 ಜನವರಿ 2024ರ ವರೆಗೆ ನಡೆದ 67ನೇ ರಾಷ್ಟ್ರೀಯ ಶಾಲಾ ಟೆಕ್ವಾಂಡೋ ಕ್ರೀಡಾಕೂಟ-  2023-24   19 ವರ್ಷ ವಯೋಮಿತಿಯ  51 ಕೆ.ಜಿ ವಿಭಾಗದಲ್ಲಿ ಕರ್ನಾಟಕ ರಾಜ್ಯದ ಪದವಿ ಪೂರ್ವ ಕಾಲೇಜು ಗಳ ತಂಡವನ್ನು ಪ್ರತಿನಿಧಿಸಿ ಬೆಳ್ಳಿ ಪದಕದೊಂದಿಗೆ ನಮ್ಮ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿರುತ್ತಾನೆ ಎಂದು
ಉಪಾಧ್ಯಕ್ಷರು ಮತ್ತು ಜಿಲ್ಲಾ ಒಲಿಂಪಿಕ್ ಸಂಸ್ಥೆಯ ಮುಖ್ಯ ಕಾರ್ಯದರ್ಶಿಗಳಾದ  ಬಿ.ಎಸ್ ತಾಳಿಕೋಟಿ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
ಈ ಕ್ರೀಡಾಕೂಟದಲ್ಲಿ ನಮ್ಮದೇ ಸಂಸ್ಥೆಯ ಕ್ರೀಡಾಪಟುಗಳಾದ ಸುಪ್ರೀತ್ ಥಿಟೆ (ಶ್ರೀ ಸಾಯಿ ವಾಣಿಜ್ಯ ಕಾಲೇಜು)  ಕುಮಾರ್. ಮೊಹಮ್ಮದ್ ಸಾದ್ ಕೊಳಚಿ (ಕರ್ನಾಟಕ ವಿಜ್ಞಾನ ಕಾಲೇಜು)  ಹಾಗೂ ಸಿ.ಬಿ.ಎಸ್.ಇ ತಂಡದಿಂದ  ಕುಮಾರ್. ಅಮೆಯ ಪಾಟೀಲ್ (ಕೆಲಗೇರಿಯ ಜೆ ಎಸ್ ಎಸ್ ಶಾಲೆ) ಕೂಡ ಆಯ್ಕೆಯಾಗಿ ಪದಕದಿಂದ ಒಂದು ಹೆಜ್ಜೆ ಹಿಂದುಳಿದಿರುತ್ತಾರೆ.
ಈ ಪದಕ ಬೇಟೆಯು ಹೀಗೆ ನಿಲ್ಲದೆ ಇಲ್ಲಿಂದ ನೇರವಾಗಿ ರಾಜಸ್ಥಾನದ ಜೆಜೆಟಿ ವಿಶ್ವವಿದ್ಯಾನಿಲಯ ಜುಂಜುನು ವಿನಲ್ಲಿ ಜನವರಿ 8 ರಿಂದ 13 ರವರೆಗೆ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯಗಳ ಟೇಕ್ವಾಂಡೋ ಕ್ರೀಡಾಕೂಟ 2023-24 ರಲ್ಲಿ ನಮ್ಮ ಸಂಸ್ಥೆಯ ಕುಮಾರ. ನಮಿತ ಕುಮಾರ ಸುಣಗಾರ (ಕರ್ನಾಟಕ ಕಲಾ ಕಾಲೇಜು)ಇವನು 63 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಕುಮಾರಿ ಅದಿತಿ ಪರಪ್ಪ ಕ್ಷಾತ್ರತೆಜ್ (ಕರ್ನಾಟಕ ಕಲಾ ಮಹಾವಿದ್ಯಾಲಯ)ಇವರು ಮಹಿಳೆಯರ 53 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಮತ್ತು ಪೂಮ್ಸೆನಲ್ಲಿ ಕಂಚಿನ ಪದಕ ವಿಜೇತರಾಗಿರುತ್ತಾರೆ, ಇವರೊಂದಿಗೆ ಅಂತರ್  ವಿಶ್ವವಿದ್ಯಾನಿಲಯಗಳ ಕ್ರೀಡಾಕೂಟದಲ್ಲಿ ಆಯ್ಕೆಯಾಗಿರುವ
 ಕೃಪಾ ಸುಂಕದ (ಕರ್ನಾಟಕ ಕಲಾ ಕಾಲೇಜು) ಸ್ಪೂರ್ತಿ ನಿಕ್ಕಮ್ (ಜೆ ಎಸ್ ಎಸ್ ಕಾಲೇಜು) ಸಹನಾ ಗೋಕಾವಿ (ಜೆ ಎಸ್ ಎಸ್ ಕಾಲೇಜು)  ಸಂಜನಾ ಬಳ್ಳಾರಿ (ಕರ್ನಾಟಕ ಕಲಾ ಮಹಾವಿದ್ಯಾಲಯ) ಭಾಗವಹಿಸಿ ಪದಕದಿಂದ ಒಂದು ಹೆಜ್ಜೆ ಹಿಂದುಳಿದಿರುತ್ತಾರೆ ಎಂದರು.
  ಇವರೊಂದಿಗೆ ತರಬೇತುದಾರರಾಗಿ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಸಂಸ್ಥಾಪಕರು ಹಾಗೂ ರಾಷ್ಟ್ರೀಯ ತರಬೇತುದಾರರು ಆದ ಪರಪ್ಪ ಕ್ಷಾತ್ರತೇಜ್, ಮುಖ್ಯ ಕಾರ್ಯದರ್ಶಿಗಳು ಜಿಲ್ಲಾ ಟೆಕ್ವಾಂಡೋ ಸಂಸ್ಥೆ, ಧಾರವಾಡ ಹಾಗೂ ಅಂತರಾಷ್ಟ್ರೀಯ ನಿರ್ಣಾಯಕರು ಆದ  ಅಂಜಲಿ ಪರಪ್ಪ ಕೆ. ವ್ಯವಸ್ಥಾಪಕರಾಗಿ ಶೋಭಾ ರಸಾಳಕರ್ ಪ್ರಯಾಣಿಸಿದ್ದರು.
ಇವರಿಗೆ  ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಅಧ್ಯಕ್ಷರಾದ  ಆನಂದ ಕುಲಕರ್ಣಿ,  ಕರ್ನಾಟಕ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊಫೆಸರ್ ಕೆ.ಬಿ ಗುಡಿಸಿ, ಕುಲಸಚಿವರಾದ ಡಾಕ್ಟರ್ ಚನ್ನಪ್ಪ ಎನ್.  ದೈಹಿಕ ಶಿಕ್ಷಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕರು ಆದ ಡಾಕ್ಟರ್ ಬಿ. ಎಂ ಪಾಟೀಲ, ಸಂಸ್ಥಾಪಕರು ಮತ್ತು ಅಧ್ಯಕ್ಷರು ಶ್ರೀ ಸಾಯಿ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಹಾಗೂ ಹೊಂಬೆಳಕು ಫೌಂಡೇಶನ್ ನ ಡಾ|| ವೀಣಾ ಬಿರಾದಾರ, ರಾಷ್ಟ್ರೀಯ ತರಬೇತಿದಾರರು ಹಾಗೂ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಸಂಸ್ಥಾಪಕರು ಆದ  ಪರಪ್ಪ ಎಸ್ .ಕೆ , ಕರ್ನಾಟಕ ಕಾಲೇಜ್ ಧಾರವಾಡ ಇದರ ಪ್ರಾಂಶುಪಾಲರಾದ ಡಾ. ಡಿ.ಬಿ ಕರಡೋಣಿ, ದೈಹಿಕ ನಿರ್ದೇಶಕರಾದ ಡಾ. ಮಂಜುನಾಥ ಅಸುಂಡಿ,  ಸಹ ತರಬೇತುದಾರರಾದ  ಆನಂದ ಕಿಟದಾಳ ಹಾಗೂ ಪಾಲಕರು ಸಂತೋಷ ವ್ಯಕ್ತಪಡಿಸುವುದರೊಂದಿಗೆ ಅಭಿನಂದಿಸಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ  ಅಧ್ಯಕ್ಷ ಆನಂದ ಕುಲಕರ್ಣಿ,ಡಾ ವಿಣಾ ಬಿರಾದಾರ, ಅಂಜಲಿ ಪರಪ್ಪ ಆನಂದ ಕಿಟದಾಳ ಶೂಭಾ ರಸಾಳಕರ ಇದ್ದರು.