Spread the love

ವಿಕಸಿತ ಭಾರತಕ್ಕೆ ನೂತನ ತಂತ್ರಜ್ಞಾನ ಮತ್ತು ಆವಿಷ್ಕಾರ ಸಂಶೋಧನೆಗಳ ಅವಶ್ಯಕತೆ ಇದೆ. ಹೊಸ ಅನ್ವೇಷಣೆ ಮತ್ತು ತಂತ್ರಜ್ಞಾನದಲ್ಲಿ ಯುವ ಸಂಶೋಧಕರ ಪಾತ್ರ ಬಹಳ ಇದೆ ಎಂದು *ದೆಹಲಿ ಐಐಟಿಯ ಕೆಮಿಕಲ್ ಇಂಜನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ. ಕೆ.ಡಿ.ಪಿ ನಿಗಮ್* ಅಭಿಪ್ರಾಯಪಟ್ಟರು.

 

ಅವರು ಕರ್ನಾಟಕ ವಿಶ್ವ ವಿದ್ಯಾಲಯವು *ರಾಷ್ಟ್ರೀಯ ವಿಜ್ಞಾನ ದಿನಾಚರಣೆರಾಷ್ಟ್ರೀಯ ವಿಜ್ಞಾನ ದಿನಾಚರಣೆಯ* ಅಂಗವಾಗಿ ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಸರ್.ಸಿ.ವಿ.ರಾಮನ್ ಸ್ಮಾರಕ ಮೂಲತತ್ವ ಉಪನ್ಯಾಸದ ಅಂಗವಾಗಿ ೨೦೨೨ ರ ಸಾಲಿನ ಉತ್ತಮ ವಿಜ್ಞಾನ ಲೇಖನ ಪ್ರಶಸ್ತಿ ಕಾರ್ಯಕ್ರಮದಲ್ಲಿ ‘ *ಕಾಯಿಲ್ಡ್ ಫ್ಲೋ ಇನ್ವರ್ಟರ್ – ಒಂದು ನವೀನ ಸಾಧನ’.* ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

 

ವಿದ್ಯಾರ್ಥಿಗಳು ಹೊಸದನ್ನು ಕಲಿಯಲು ಮತ್ತು ಭಿನ್ನವಾಗಿ ವಿಚಾರವನ್ನು ಮಾಡುವುದನ್ನು ಕಲಿಯಬೇಕು. ಹೊಸದನ್ನು ಕಲಿಯಲು ವಿದ್ಯಾರ್ಥಿಗಳು ಆಸಕ್ತಿಯನ್ನು ಹೊಂದಬೇಕು. ವೈಜ್ಞಾನಿಕವಾಗಿ ಚಿಂತನೆ ಮಾಡುವುದು ಮತ್ತು ಇಂದಿನ ಯುವ ಸಮುದಾಯ ದೇಶವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ಇದೆ ಎಂದರು. ಗುಣಮಟ್ಟದ ಆಹಾರ ಉತ್ಪಾದನೆಯಲ್ಲಿ ಹೊಸ ಸಂಶೋಧನೆಗಳ ಪಾತ್ರ ಬಹಳ ಇದೆ ಎಂದರು. ನೂತನ ವೈಜ್ಞಾನಿಕ ಸಂಶೋಧನೆಗಳ ಮೂಲಕ ದೇಶದ ಸಮಸ್ಯೆಗಳನ್ನು ಪರಿಹರಿಸುವಂತಾಗಬೇಕು ಎಂದರು. ಭಾರತವು ವಿಜ್ಞಾನದ ಕ್ಷೇತ್ರದಲ್ಲಿ ಸಂಶೋಧನೆಗಳ ಮುಖಾಂತರ ಜಗತ್ತನ್ನು ಆಕರ್ಷಿಸಿದೆ ಎಂದರು.

 

ಕಾಯಿಲ್ಡ್ ಫ್ಲೋ ಇನ್ವರ್ಟರ್ ಅನೇಕ ಉದ್ಯಮಗಳಲ್ಲಿ ಪರಿಣಾಮಕಾರಿಯಾಗಿ ಬಳಕೆ ಮಾಡಲಾಗುತ್ತದೆ ಎಂದ ಅವರು ಈ ಸಾಧನಕ್ಕೆ ವಿವಿಧ ಕ್ಷೇತ್ರಗಳಲ್ಲಿ ಅಗತ್ಯಕ್ಕೆ ತಕ್ಕಂತೆ ವಿದೇಶದ ಉದ್ಯಮದಲ್ಲಿ ಬಳಸಲಾಗುತ್ತದೆ ಎಂದರು. ಟ್ರೀಕಲ್ ಬೆಡ್ ರಿಯಾಕ್ಟರ್ ಸಂಶೋಧನೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಐಐಟಿ ದೆಹಲಿ ಮೂರನೇ ಸ್ಥಾನದಲ್ಲಿ ಇದೆ ಎಂದ ಅವರು ಒಬ್ಬ ಉತ್ತಮ ಸಂಶೋಧಕನಿಗೆ ಸೃಜನಶೀಲತೆ, ಆಸಕ್ತಿ ಹೊಂದಿರಬೇಕು ಎಂದರು.

ಡಾ.ಸರಸ್ವತಿ ಮಾಸ್ತಿ, ಡಾ. ಮಹಾದೇವಪ್ಪ ಕರಿದುರ್ಗನವರ, ಪ್ರೊ.ಕೆ.ಬಿ.ಗುಡಸಿ, ಪ್ರೊ.ಆರ್.ಎಫ್ ಭಂಜಂತ್ರಿ, ಡಾ.ಆಶಾ ಕೊಟನೂರಕರ, ಡಾ. ಹರಿಶ್ಚಂದ್ರ ರಾಮನೆ, ಪ್ರೊ.ಶ್ರೀನಿವಾಸ ನಾಯಕ, ಡಾ.ಜಯಶ್ರೀ ತೋನಣ್ಣವರ ಅವರು ಇದೆ ಸಂದರ್ಭದಲ್ಲಿ ೨೦೨೨ ನೇ ಸಾಲಿನ ಉತ್ತಮ ವಿಜ್ಞಾನ ಲೇಖನಗಳ ಪ್ರಶಸ್ತಿಯನ್ನು ಪಡೆದರು. ಇದರಲ್ಲಿ ಪ್ರೊ.ಎಂ.ಡೇವಿಡ್ ಅವರ ಶ್ರೇಷ್ಠ ಉತ್ತಮ ವಿಜ್ಞಾನ ಲೇಖನಕ್ಕೆ ೧೦ ಸಾವಿರ ನಗದು ಬಹುಮಾನ ಪಡೆದರು.

 

ಇದೆ ಸಂದರ್ಭದಲ್ಲಿ ಪ್ರಶಸ್ತಿ ಪಡೆದ ಉತ್ತಮ ವಿಜ್ಞಾನ ಲೇಖನಗಳ ಗುಚ್ಛವನ್ನು ಹೊಂದಿದ ವಾರ್ಷಿಕ ನಿಯತಕಾಲಿಕೆ ಯನ್ನು ಗಣ್ಯರು ಬಿಡುಗಡೆ ಮಾಡಿದರು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ.ಕೆ.ಬಿ. ಗುಡಸಿ ಮಾತನಾಡಿ…. ದೇಶದ ಅಭಿವೃದ್ಧಿಗೆ ಹೊಸ ಸಂಶೋಧನೆ ಮತ್ತು ಅನ್ವೇಷಣೆಗಳು ಬಹಳ ಮುಖ್ಯ ಎಂದ ಅವರು ಒಬ್ಬ ಸಂಶೋಧಕನಿಗೆ ಸಮಾಜಕ್ಕೆ ಉಪಯುಕ್ತ ವಾಗುವ ರೀತಿಯಲ್ಲಿ ಅನ್ವೇಷಣೆ ಮಾಡಿದಾಗ ಅದಕ್ಕಿಂತ ತೃಪ್ತಿ ಬೇರೆ ಯಾವದು ಇಲ್ಲ. ಎಂದ ಅವರು ಲಭ್ಯವಿರುವ ಉಪಕರಣ ಸಂಪನ್ಮೂಲಗಳಿಂದ ಬಹುಪಯೋಗಿ, ಕಡಿಮೆ ವೆಚ್ಚದಾಯಕ ಸಂಶೋಧನೆಗಳನ್ನು ಇಂದಿನ ಪ್ರಯೋಗಾಲಯಗಳಲ್ಲಿ ನಡೆಯಬೇಕಾಗಿದೆ ಎಂದರು. ಕರ್ನಾಟಕ ವಿಶ್ವವಿದ್ಯಾಲವು ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದ್ದು, ಅನೇಕ ಸಂಶೋಧನೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಪೇಟೆಂಟ್ ಗಳನ್ನು ಹೊಂದಿದೆ ಎಂದರು.

 

ಕಾರ್ಯಕ್ರಮದಲ್ಲಿ ಕವಿವಿ ಕುಲಸಚಿವರಾದ ಡಾ. ಎ ಚೆನ್ನಪ್ಪ, ಮೌಲ್ಯಮಾಪನ ಕುಲಸಚಿವರಾದ ಡಾ.ನಿಜಲಿಂಗಪ್ಪ ಮಟ್ಟಿಹಾಳ್, ಹಣಕಾಸು ಅಧಿಕಾರಿ ಪ್ರೊ. ಸಿ.ಕೃಷ್ಣಮೂರ್ತಿ, ಮೂಲತತ್ವ ಉಪನ್ಯಾಸ ಮಾಲೆಯ ಸಂಯೋಜಕ ಡಾ. ಮಲ್ಲಿಕಾರ್ಜುನ ಪಾಟೀಲ, ಕವಿವಿ ಪ್ರಸಾರಾಂಗ ನಿರ್ದೇಶಕ ಡಾ. ಚಂದ್ರಶೇಖರ್ ರೊಟ್ಟಿಗವಾಡ, ಡಾ. ರವೀಂದ್ರ ಕಾಂಬಳೆ, ಪ್ರೊ. ಎಂ. ಡೆವಿಡ್ ಡಾ. ಬುಜುರ್ಕೆ, ಪ್ರೊ. ಆರ್.ಎಸ್ ಶಿರಾಳಶೆಟ್ಟಿ, ಡಾ. ಶ್ಯಾಮಲಾ ರತ್ನಾಕರ್, ಸೇರಿದಂತೆ ಸಂಶೋಧಕರು, ವಿದ್ಯಾರ್ಥಿಗಳು ಹಾಜರಿದ್ದರು.