Spread the love

ಧಾರವಾಡ : ಬಾಳಿಕಾಯ ಓಣಿಯ ಶ್ರೀ ನಾಮದೇವ ಹರಿಮಂದಿರದಲ್ಲಿ ,
ರುಕ್ಮಿಣಿ ಮಹಿಳಾ ಮಂಡಳದವರಿಂದ ಸಂಕ್ರಾಂತಿ ಅರಷಿಣ ಕುಂಕುಮದ ಕಾರ್ಯಕ್ರಮ ನಿಮಿತ್ತ 60 ಸದಸ್ಯ ಸುಮಂಗಲಿಯರಿಗೆ ಭೋಗಿ ಬಾಗಿಣ ಸಮಾರಂಭ ಕಾರ್ಯಕ್ರಮ ಹಮ್ಮಿಕೂಂಡಿತ್ತು ,

ಅತಿಥಿಗಳಾಗಿ ಆಗಮಿಸಿದ್ದ ವಾಣಿ ರಾಮಚಂದ್ರ ಹಂದಿಗೋಳ ಮಾತನಾಡಿ ಮದುವೆಯ ಸಮಾರಂಭದಲ್ಲಿ ಮದುಮಗಳು ಗೌರಿ ಪೂಜೆ ಸಲ್ಲಿಸಿ ಮೂದಲು ತಾಯಿ, ಅತ್ತೆ, ಇತರ ಮೂವರು ಹಿರಿಯ ಸುಮಂಗಲಿಯರಿಗೆ ಬಾಗಣ ಅಪಿ೯ಸುವ ಕಾರ್ಯಕ್ರಮ ನಡೆಯುತ್ತದೆ, ಅವರ ಆಶೀರ್ವಾದಿಂದ ತನ್ನ ಸೌಭಾಗ್ಯ ಹಾಗೂ ಸಂಸಾರದಲ್ಲಿ ಸುಖ,ಶಾಂತಿ,ಸಮ್ರುದ್ದಿ ಇಂದ ನಡೆಯಲಿ ಎಂದು ಬೇಡಿಕೂಳ್ಳುತ್ತಾಳೆ ಈ ರೀತಿ ಅವಳ ಮೂದಲು ದಾನ ಮಾಡುವ ಪ್ರವ್ರತ್ತಿ ಅವಳಲ್ಲಿ ಬೆಳೆಯಲಿ ಎಂಬುವದೆ ಇದರ ಉದ್ದೇಶ ಆಗಿದೆ. ಗಳಸಿದ್ದೆಲ್ಲ ತನ್ನ ಸ್ವಂತ ಕ್ಕೆ ಬಳಸದೆ, ತನ್ನ ನೆರೆ ಹೂರೆಯವರು ತನ್ನ ಸಂತೋಷದಲ್ಲಿ ಭಾಗಿ ಆಗಲಿ ಎಂಬ ಉದ್ದೇಶದಿಂದ ಬಾಗಿಣ ಕೋಡುತ್ತಾಳೆ ಎಂದರು.

ಬಾಗಿಣದಲ್ಲಿ ಮುತ್ತೈದೆ ಉಪಯೋಗ ಮಾಡುವ ವಸ್ತುಗಳಾದ ಅರಷಿಣ,ಕುಂಕುಮ, ಕನ್ನಡಿ,ಬಾಚಣಕಿ, ಹಸಿರು ಬಳೆ ಅಲ್ಲದೆ ಯಥಾ ಶಕ್ತಿ ಹಿಟ್ಟು, ಆಯಾ ಮಾಸದಲ್ಲಿ ಬೆಳೆಯುವ ತರಕಾರಿ,ಬೆಲ್ಲ ,ಅಕ್ಕಿ, ತೆಂಗಿನ ಕಾಯಿ ದಕ್ಷಣೆ ಸಹಿತ ಮರತುಂಬಿ ಆ ಸಂಸಾರ ಊಟ ಮಾಡುವಷ್ಟು ಯಥಾ ಶಕ್ತಿ ಕೊಡಬೇಕು, ಅದನ್ನು ಪಡೆದವರು ಸಹ ಅಷ್ಟೆ ಭಕ್ತಿ ಭಾವ ದಿಂದ ದೇವರ ಮುಂದೆ ಇಟ್ಟು
ಅಯಾ ವಸ್ತುಗಳ ತಮ್ಮ ಮನೆಯ ಭಂಡಾರದಲ್ಲಿ ಸೇರಿಸಿ ಅದನ್ನು ಉಪಯೋಗಿಸುವದರಿಂದ ಆಹಾರ ಅಕ್ಷಯ ಆಗುವದರಲ್ಲಿ ಸಂಶಯವಿಲ್ಲ ಎಂದರು.

ಶ್ರೀ ನಾಮದೇವ ಸಿಂಪಿ ಸಮಾಜದ ಬಂಧು ಭಗಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.