Spread the love

ಧಾರವಾಡ  : ಕರ್ನಾಟಕ ವಿಶ್ವವಿದ್ಯಾಲಯವು ತನ್ನದೇ ಗತವೈಭವನ್ನು ಹೊಂದಿದ್ದು, ಹಸಿರುವನದ ಮಧ್ಯ ತನ್ನದೇ ಆದ ಒಂದು ನೈಸರ್ಗಿಕ ಸೌಂದರ್ಯವನ್ನು ಹೊಂದಿದ್ದು, ವಿಶ್ವವಿದ್ಯಾಲಯವು ಅನೇಕ ಉದ್ಯಾನ, ಮತ್ತು ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಸಸ್ಯವನಗಳನ್ನೂ ಕೂಡ ಹೊಂದಿದೆ. ನಗರದ ಕರ್ನಾಟಕ ವಿಶ್ವವಿದ್ಯಾಲಯದ ಉದ್ಯಾನ ವಿಭಾಗವು ಸುಮಾರು ೧೯೬೦ ರಿಂದ ಇಲ್ಲಿಯವರೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುವ ಉದ್ಯಾನ ಸ್ಪರ್ಧೆ ಮತ್ತು ಫಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸುತ್ತಾ ಬಂದಿದೆ. 1970  ರಿಂದ 1985 ರವರೆಗೆ ಉದ್ಯಾನಗಳ ಸ್ಪರ್ದೆಯಲ್ಲಿ  ಸತತವಾಗಿ  15 ವರ್ಷ ಜನರಲ್ ಚಾಂಪಿಯನ್ ಪಡೆದುಕೊಂಡ ಇತಿಹಾಸವಿದೆ. 2008 ರಿಂದ ಇಲ್ಲಿಯವರೆಗೆ 23 ವರ್ಷ ಸತತವಾಗಿ ಫಲಪುಷ್ಪ ಪ್ರದರ್ಶನದಲ್ಲಿ ಜನರಲ್ ಚಾಂಪಿಯನ್ ಪಡೆದಿದೆ.
ಕೃಷಿ ಮತ್ತು ತೋಟಗಾರಿಕಾ ಇಲಾಖೆಯು ಆಯೋಜಿಸಿದ 2023-24 ನೇ ಸಾಲಿನ ಜಿಲ್ಲಾ ಮಟ್ಟದ ಪಲಪುಷ್ಟ ಪ್ರದರ್ಶನದಲ್ಲಿ ಉದ್ಯಾನ ಸ್ಪರ್ದೆ ಮತ್ತು ಫಲ ಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯಲಾಗಿದೆ.
ಕುಂಡಲೆಗಳ ಜೋಡಣೆ ಮತ್ತು ಫಲ ಪುಷ್ಪ ಪ್ರದರ್ಶನದಲ್ಲಿ-ಜನರಲ್ ಚಾಂಪಿಯನ್, ಉದ್ಯಾನಗಳ ಸ್ಪರ್ದೆಯಲ್ಲಿ-ರನ್ನರಶಿಪ್, ಕುಲಪತಿಗಳ ಬಂಗ್ಲೆ ಮತ್ತು ಹಸಿರು ಗೃಂಥಾಲಯದ ಉದ್ಯಾನ ಸ್ಪರ್ಧೆಯಲ್ಲಿ- ಚಾಂಪಿಯನ್, ಗುಲಾಬಿ ವನ- ಚಾಂಪಿಯನ್, ಕ್ರೋಟಾನ ಜೋಡಣೆ- ಚಾಂಪಿಯನ್, ಕುಂಡಗಳ ವಿಭಾಗ- ಚಾಂಪಿಯನ್, ಆಡಳಿತ ಕಚೇರಿ ಮತ್ತು ಮುಖ್ಯ ಕಟ್ಟಡದ ಉದ್ಯಾನ – ಪ್ರಥಮ, ಕುಲಸಚಿವರ ಬಂಗ್ಲೆ ಉದ್ಯಾನ- ದ್ವಿತಿಯ, ಕುಂಡಗಳ ವಿಭಾಗ-60 ಪ್ರಥಮ ಮತ್ತು 20 ದ್ವಿತಿಯ ಮತ್ತು ಔಷಧಿ ಗಿಡಗಳು- ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
 ಈ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ.ಗುಡಸಿ ತಮ್ಮ ಅಭಿಪ್ರಾಯ* ವ್ಯಕ್ತಪಡಿಸಿ  ಕರ್ನಾಟಕ ವಿಶ್ವವಿದ್ಯಾಲಯಯದವು ಜನೇವರಿಯಲ್ಲಿ ನಡೆದ ಫಲ ಪುಷ್ಪ ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿ ಫಲಪುಷ್ಪ ಪ್ರದರ್ಶನದಲ್ಲಿ ಜನರಲ್ ಚಾಂಪಿಯನ್ ಪಡೆದುಕೊಂಡಿರುವದು ಸಂತಸದ ಸಂಗತಿ. ಈ ನಿಟ್ಟಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ವಿವಿಧ ರೀತಿಯ ಉದ್ಯಾನ ನಿರ್ವಹಣೆ ಸಸ್ಯಗಳ ಪಾಲನೆ ಪೂಷಣೆ ಮಾಡುತ್ತಿರುವ ಸಿಬ್ಬಂದಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಕರ್ನಾಟಕ ವಿಶ್ವವಿದ್ಯಾಲಯವು ನರ್ಸರಿ ಹೊಂದಿದ್ದು ಅದರಲ್ಲಿ ನೆರಳನ್ನು ಪ್ರೀತಿಸುವ ವಿವಿದ ೧೫೦ ಕ್ಕೂ ಹೆಚ್ಚು ಜಾತಿಯ ಗಿಡಗಳನ್ನು, ವಿವಿದ ಬಣ್ಣಗಳಿರುವ ಕ್ರೋಟಾನ ಮತ್ತು ಕೋಲಿಯಾಸ ಜಾತಿಯ ಗಿಡಗಳನ್ನು ಸಂರಕ್ಷಣೆ ಮಾಡಲಾಗುತ್ತಿದೆ. ಉದ್ಯಾನಗಳಲ್ಲಿ ಹಳೆಯ ಮತ್ತು ಹೊಸ ಹೂವಿನ ಜಾತಿಯ ಗಿಡಗಳನ್ನು ಬೆಳೆದು ಸಂರಕ್ಷಣೆ ಮಾಡಿ ಬೀಜಗಳ ಸಂಗ್ರಹ ಮಾಡುವದಲ್ಲದೆ ಬಹಳ ವರ್ಷಗಳಿಂದ ತಳಿಗಳ ವಂಶವನ್ನು ಸಂರಕ್ಷಣ ಮಾಡುತ್ತಾ ಬರಲಾಗಿದೆ. ಜೊತೆಗೆ ಔಷಧಿಯುಕ್ತ ಗಿಡಗಳ ಅಭಿವೃದ್ದಿ ಮತ್ತು ಸಂರಕ್ಷಣೆ ಮಾಡುತ್ತಾ ಬರಲಾಗುತ್ತಿದೆ ಎಂದು ಕವಿವಿ ಉದ್ಯಾನ ವಿಭಾಗದ ಕ್ಯೂರೇಟರ್ ಡಾ. ಜಿ.ಎಸ್. ಮುಳಗುಂದ ಹೇಳಿದರು.
ಕೃಷಿ ಮತ್ತು ತೋಟಗಾರಿಕೆ ತೋಟಗಾರಿಕೆ ಇಲಾಖೆಯು ಜನೇವರಿ ೨೬ ರಿಂದ ೨೮ರ ವರಗೆ ನಡೆದ ಫಲಪುಷ್ಪ ಪ್ರದರ್ಶನದಲ್ಲಿ ಕವಿವಿ ಫಲ ಪುಷ್ಟಪ ಪ್ರದರ್ಶ.

ಕೃಷಿ ಮತ್ತು ತೋಟಗಾರಿಕೆ ತೋಟಗಾರಿಕೆ ಇಲಾಖೆಯು ಜನೇವರಿ 26 ರಿಂದ 28 ರ ವರಗೆ ನಡೆದ ಫಲಪುಷ್ಪ ಪ್ರದರ್ಶನದಲ್ಲಿ ಪಡದ ಪ್ರಶಸ್ತಿಗಳು