Spread the love

ಧಾರವಾಡ : “ಯುವ ಪದವೀಧರರು ದೇಶ ಸೇವೆಗೆ ಮುಂದಾಗಬೇಕು”
75 ನೆಯ ಗಣರಾಜ್ಯೋತ್ಸವ ಅಂಗವಾಗಿ ದಿನಾಂಕ 26 ಬೆಳಿಗ್ಗೆ 8.30 ಗಂಟೆಗೆ ಭಾರತೀಯ ವೈದ್ಯಕೀಯ ಸಂಘ ಧಾರವಾಡ ಆವರಣದಲ್ಲಿ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ||ಸತೀಶ್ ಇರಕಲ್ ಇವರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ಸಮಾರಂಭ ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬ್ರಿಗೆಡಿಯರ್ ಸುಧೀರ್ ಇತನಾಳ ಉಪಸ್ಥಿತರಿದ್ದು, 75 ನೆಯ ಗಣರಾಜ್ಯೋತ್ಸವ ಅಂಗವಾಗಿ ಎಲ್ಲ ವೈದ್ಯಕೀಯ ಸಂಘದ ಸದಸ್ಯರಿಗೆ ಶುಭ ಕೋರುತ್ತಾ, ನಮ್ಮ ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಎಲ್ಲರಿಗೂ ನಮಿಸುತ್ತ ಎಲ್ಲಾ ಜನಸಾಮಾನ್ಯರು ದೇಶಭಕ್ತಿ ಹಾಗೂ ದೇಶದ ಹೆಚ್ಚಿನ ಉತ್ತೀರ್ಣ ಮತ್ತು ರಕ್ಷಣೆ ಗೋಸ್ಕರ ಯುವ ಪೀಳಿಗೆ ಹಾಗೂ ಪದವೀಧರರು ಸೇನೆಯಲ್ಲಿ ಸೇವೆ ಸಲ್ಲಿಸಲು ಮುಂದಾಗ ಬೇಕೆಂದು ಕೋರಿದರು.

ಧಾರವಾಡ ಮೂಲದ ವೈದ್ಯ ಮೇಜರ್ ಡಾ|| ಸುಮೇದ ಅಂಬೇಕರ್ ಬೆಳಗಾವಿಯ ಸೇನಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಶ್ಲಾಘನೀಯ. ಅದೇ ರೀತಿ ಇನ್ನೂ ಹೆಚ್ಚಿನ ಪದವೀಧರರು ಸ್ವ ಇಚ್ಛೆಯಿಂದ ದೇಶದ ಸೇವೆಗೆ ಮುಂದಾಗಬೇಕೆಂದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ|| ಸತೀಶ್ ಇರಕಲ್ ಸಂಘದ ಧ್ವಜಾರೋಹಣ ಮಾಡಿ ಎಲ್ಲಾ ಸದಸ್ಯರಿಗೂ ಸ್ವಾಗತಿಸುತ್ತಾ ತಮ್ಮ ಅಧ್ಯಕ್ಷತೆ ಭಾಷಣದಲ್ಲಿ ಗಣರಾಜ್ಯೋತ್ಸವ ಶುಭಕೋರಿ ” ವೈದ್ಯೋ ನಾರಾಯಣೋ ಹರಿ” ಎಂಬ ನುಡಿ ತಕ್ಕಂತೆ ಎಲ್ಲಾ ವೈದ್ಯರು ಜನಸೇವೆಯನ್ನು ಮಾಡುತ್ತಿದ್ದು ಹಾಗೂ ಕೋವಿಡ್ ಸಮಯದಲ್ಲಿ ಸೇವೆ ಕೊಟ್ಟಂತ ಎಲ್ಲಾ ವೈದ್ಯರಿಗೆ ಶ್ಲಾಗಿಸುತ್ತಾ, ಯುವ ವೈದ್ಯರು ನಮ್ಮ ದೇಶದ ಹಿತದೃಷ್ಟಿಯನ್ನು ಮುಂದಿಟ್ಟುಕೊಂಡು ಸೇನಾ ವಿಭಾಗದಲ್ಲಿ ಕೂಡ ವೈದ್ಯಕೀಯ ಸೇವೆ ನೀಡಲು ಮುಂದಾಗ ಬೇಕೆಂದು ಕೋರಿದರು.

ಧಾರವಾಡ ವೈದ್ಯಕೀಯ ಸಂಘದ ಹಿರಿಯ ವೈದ್ಯರಾದ ಡಾ||ಆನಂದ್ ಪಾಂಡುರಂಗಿ, ಡಾ|| ಹಲಸಂಗಿ ಮಠ ,ಡಾ|| ಸುರೇಶ್ ,ಡಾ|| ದಿಲೀಪ್ ದೇಶಪಾಂಡೆ, ಡಾ|| ಸುಧೀರ್ ಜಂಬಗಿ, ಡಾ|| ಆರ್ ಜಿ ಪುರಾಣಿಕ್, ಡಾ|| ಸಾಮ್ರಾಣಿ, ಡಾ|| ನವೀನ್ ಮಂಕನಿ, ಡಾ||ಸಪ್ಪನ್, ಡಾ|| ಜಗದೀಶ್ ನಿರಡಿ ಹಾಗೂ
ಮಹಿಳಾ ವೈದ್ಯಕೀಯ ವಿಭಾಗದ ಚೇರ್ಮನ್ ಡಾ|| ಕವಿತಾ ಮಂಕಣಿ ಕಾರ್ಯದರ್ಶಿ ಡಾ||ಪಲ್ಲವಿ ದೇಶಪಾಂಡೆ ಹಾಗೂ ಇತರ ಸಂಘದ ಸದಸ್ಯರು ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಡಾ||ವಾಣಿ ಇರಕಲ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಡಾ||ಸುಹಾಸ್ ಹಂಚಿನಮನಿ ವಂದನಾರ್ಪಣೆ ಮಾಡಿದರು.