Spread the love

ಧಾರವಾಡ :ಫೆಬ್ರುವರಿಯ ದಿ 6 ರಂದು ನಡೆಯುವ ಬೆಂಗಳೂರು ಹೋರಾಟದ ವಿಷಯ ಕುರಿತು ಹಾಗೂ ಬಜೆಟ್ ಮಂಡನೆಯ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಲವಾರು ಬೇಡಿಕೆಗಳನ್ನು ಇಡೇರಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡುವಂತೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಸಂತೋಷ ಲಾಡ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಬೇಡಿಕೆಗಳು :
ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಗೌರವ ಧನವನ್ನು ರೂ 15,000ಕ್ಕೆ ಹೆಚ್ಚಿಸಬೇಕು ಮತ್ತು ನಿವೃತ್ತಿ ಪರಿಹಾರ ರೂ. 2 ಲಕ್ಷ ನೀಡಬೇಕು, 2024-25 ನೇ ಸಾಲಿನ ಬಜೆಟ್ ನಲ್ಲಿ ಗೌರವ ಧನವನ್ನು ಹೆಚ್ಚಿಸಬೇಕು,

ಸುಪ್ರೀಂಕೋರ್ಟ್ ಆದೇಶದಂತೆ ಅಂಗನವಾಡಿ ನೌಕರರಿಗೆ ಗ್ರಾಚೂಟಿ (ಉಪ ಧನ) ಹಣ ನೀಡಲು ಸೂಕ್ತ ಆದೇಶ ಹೊರಡಿಸಬೇಕು ಮತ್ತು ಸಮರ್ಪಕವಾಗಿ ಅನುದಾನ ಬಿಡುಗಡೆ ಮಾಡಬೇಕು.

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಕ್ಷೇಮಾಭಿವೃದ್ಧಿ ನಿಧಿಯಿಂದ ಅವರ ವಿವಿಧ ಗಂಭೀರ ಕಾಯಿಲೆಗಳ ಚಿಕಿತ್ಸೆಗಳಿಗೆ ನೀಡುತ್ತಿರುವ ವೈದ್ಯಕೀಯ ವೆಚ್ಚಗಳ ಸಹಾಯ ಧನ ಹಲವಾರು ವರ್ಷಗಳಿಂದ ಪಾವತಿಯಾಗುತ್ತಿಲ್ಲ ಕೂಡಲೇ ಪಾವತಿಸಲು ಕ್ರಮ ವಹಿಸಬೇಕು, ಸಹಾಯ ಧನವನ್ನು ಕನಿಷ್ಟ ರೂ.2 ಲಕ್ಷಗಳಿಗೆ ಹೆಚ್ಚಿಸಬೇಕು.

ಈಗಾಗಲೇ ನಿವೃತ್ತಿಯಾದ ನೌಕರರಿಗೆ ರೂ.50,000 ಮತ್ತು ರೂ.30,000 ನಿವೃತ್ತಿ ಪರಿಹಾರ ಹಣ ಸಿಗುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸಿ ಸರಳವಾಗಿ ನಿವೃತ್ತಿ ಪರಿಹಾರ ಸಿಗುವಂತೆ ಸೂಕ್ತ ಕ್ರಮವಹಿಸಬೇಕು ಮತ್ತು ನೌಕರರನ್ನು ಸರ್ಕಾರದ ಪಿಂಚಣಿ ಯೋಜನೆಗೆ ಒಳಪಡಿಸಬೇಕು, ಅಲ್ಲಿಯವರೆಗೂ ನಿವೃತ್ತಿ ಪರಿಹಾರ ಇಡುಗಂಟು ರೂ.5ಲಕ್ಷಗಳಿಗೆ ನಿಗದಿ ಮಾಡಬೇಕು,

ಸೇವಾ ಹಿರಿತನವನ್ನು ಆಧರಿಸಿ 50% ಮತ್ತು ಮೆರಿಟ್ ಆಧರಿಸಿ 50% ಮೇಲಿನ ಹುದ್ದೆಗೆ ಮುಂಬಡ್ತಿ ಹೊಂದಲು ಈ ಹಿಂದೆ ಇದ್ದ ಆದೇಶ ವನ್ನೇ ಮುಂದುವರಿಸಬೇಕು, ಹೊಸ ಆದೇಶವನ್ನು ಹಿಂಪಡೆಯಬೇಕು.

ಸುಪ್ರೀಂ ಕೋರ್ಟ್ ನ ನಿರ್ದೇಶನದಂತೆ, ಐಸಿಡಿಎಸ್ ಕೆಲಸಗಳನ್ನು ಹೊರತುಪಡಿಸಿ, ಇತರ ಇಲಾಖೆಗಳ ಹೆಚ್ಚುವರಿ ಕೆಲಸಗಳನ್ನು ನೀಡಬಾರದು ಮತ್ತು ಈಗ ಮಾಡುತ್ತಿರುವ ಹೆಚ್ಚುವರಿ ಕೆಲಸಗಳಿಂದ ಬಿಡುಗಡೆ ಮಾಡಬೇಕು.

ಪ್ರತಿ ತಿಂಗಳು 5ನೇ ತಾರಿಖಿನ ಒಳಗಾಗಿ, ಮಾಸಿಕ ವೇತನ (ಗೌರವ ಧನ) ಪಾವತಿ ಮಾಡಬೇಕು,

ಪ್ರತಿವರ್ಷ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಎರಡು ಜೊತೆ ಸಮವಸ್ತ್ರ ನಿಡಬೇಕು.

ಕಾರ್ಯಕರ್ತೆಯರ ಮೊಬೈಲ್‌ಗಳಿಗೆ ಈ ಕೂಡಲೆ ರೀಚಾರ್ಜ್ ಮಾಡಿಸಬೇಕು. ಮಾತೃಪೂರ್ಣ ಯೋಜನೆ ಫಲಾನುಭವಿಗಳಿಗೆ ಆಹಾರ ಪದಾರ್ಥಗಳನ್ನು ಮನೆಗೆ ನೀಡಲು ಆದೇಶ ಮಾಡಬೇಕು ಮತ್ತು ಮಾತೃ ವಂದನಾ, ಬಾಗ್ಯಲಕ್ಷ್ಮೀ ಕೆಲಸಗಳಿಗೆ ಹೆಚ್ಚುವರಿ ಗೌರವ ಧನವನ್ನು ನಿಡಬೇಕು.

ಐಸಿಡಿಎಸ್ ನ ಮೂಲ ಯೋಜನೆಯನ್ನು ಎನ್‌ಇಪಿ – 2020 ನೀತಿಯಂತೆ ಬದಲಾಯಿಸುವ ರಾಜ್ಯ ಸರ್ಕಾರದ ಯಾವುದೇ ಕ್ರಮವನ್ನು ಕೈಬಿಡಬೇಕು, ಅಂಗನವಾಡಿ ಯೋಜನೆಯನ್ನು ಬಲಪಡಿಸಬೇಕು.

ಬೆಲೆ ಏರಿಕೆಯ ಇಂದಿನ ದರದಲ್ಲಿ ಅಂಗನವಾಡಿ ಕೇಂದ್ರಗಳ ಬಾಡಿಗೆ ದರ, ಮೊಟ್ಟೆ ದರ, ಸಾದಿಲ್ವಾರು, ಫೆಕ್ಸಿ ಫಂಡ್ ಅನುದಾನ ಇತ್ಯಾದಿ ದರಗಳನ್ನು ಹೆಚ್ಚಿಸಬೇಕು ಮತ್ತು ಹಲವಾರು ತಿಂಗಳು ಗಳ ಕಾಲ ಬಾಕಿ ಹಣ ಪಾವತಿ ಮಾಡಬೇಕು ಮತ್ತು ಈ ಮುಂದಿನಿಂದ ಪ್ರತಿ ತಿಂಗಳು ಸಕಾಲದಲ್ಲಿ ಇವುಗಳಿಗೆ ಹಣ ಬಿಡುಗಡೆ ಮಾಡಬೇಕು.

ಅಂಗನವಾಡಿ ಕೇಂದ್ರಗಳಿಗೆ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ಅಗತ್ಯ ವಸ್ತುಗಳು ಮತ್ತು ಪೆಟ್ರೋಲ್, ಅಡುಗೆ ಅನಿಲ, ಡೀಸೆಲ್ ಬೆಲೆಗಳನ್ನು ಕೆಳಗಿಳಿಸಿ, ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಿರಿ, ಅಂಗನವಾಡಿ ಕೇಂದ್ರಗಳಿಗೆ ಸಮರ್ಪಕ ಇಂಟರ್ನೆಟ್ ಸಂಪರ್ಕ ಸಹಿತ ಉತ್ತಮ ಗುಣಮಟ್ಟದ ಮೊಬೈಲ್ ಸೆಟ್ ಗಳು, ಶುದ್ಧ ಕುಡಿಯುವ ನೀರು, ಶೌಚಾಲಯ ಸಹಿತ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.

ವಿವಿಧ ಸರ್ವೇ ಗಳನ್ನು ಮೊಬೈಲ್ ಮೂಲಕ ಮಾಡಲು ಬಲವಂತ ಪಡಿಸುವುದನ್ನು ನಿಲ್ಲಿಸಿ, ಮೊಬೈಲ್ ಸರ್ವೇ ಮಾಡಲು ಆಗದೇ ಇರುವುದಕ್ಕೆ ಇರುವ ಸಮಸ್ಯೆಗಳನ್ನು ಪರಿಹರಿಸಲು ಕೂಡಲೇ ಯೂನಿಯನ್ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ, ಸಮಸ್ಯೆಗಳನ್ನು ಇತ್ಯರ್ಥ ಪಡಿಸಿ,

ಅಂಗನವಾಡಿ ಕೇಂದ್ರಗಳಿಗೆ ಪ್ರತಿ ವರ್ಷಕ್ಕೆ 8, ಸಿಲೆಂಡರ್ ಗಳು ಕೊಡಬೇಕೆಂದು ಇದೆ ಅದರೆ ಅಷ್ಟು ಸಿಲೆಂಡರ್ ಗಳು ಬರುತ್ತಿಲ್ಲ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

ಅಂಗನವಾಡಿ ಕೇಂದ್ರಗಳಿಗೆ ಇನ್ ಚಾರ್ಜ್ ಕಾರ್ಯ ಕರ್ತೆಯರಿಗೆ ನೀಡುವ ವೇತನವನ್ನು ಹೆಚ್ಚಿಸಬೇಕು.

ಅಂಗನವಾಡಿ ಕೇಂದ್ರಗಳಲ್ಲಿ ಹಲವಾರು ವರ್ಷಗಳಿಂದ ಖಾಲಿ ಇರುವ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಬೇಕು.

ಅಂಗನವಾಡಿ ಗಳನ್ನು ಪೂರ್ಣ ಪ್ರಮಾಣದ ಅಂಗನವಾಡಿಗಳಾಗಿ ವಿಸ್ತರಿಸಬೇಕು.

ಈ ಹಿಂದೆ ಅಂಗನವಾಡಿ ನೌಕರರಿಗೆ ರಾಜ್ಯ ಸರ್ಕಾರವೇ ಸಮಾ ವಸ್ತ್ರ ವಿತರಣೆ ಮಾಡಲಾಗುತ್ತಿತ್ತು ಹಿಂದಿನಂತೆ ಸಮವಸ್ತ್ರ ವಿತರಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜ್ಯದದ್ಯಾಯಂತ ಎಲ್ಲಾರಿಗೂ ಒಂದೇ ಬಣ್ಣ ಹಾಗೂ ಗುಣಮಟ್ಟದ ಸಮ ವಸ್ತ್ರವನ್ನು ಪ್ರತಿ ವರ್ಷ ತಪ್ಪದೇ ವಿತರಣೆ ಮಾಡಬೇಕು.

ಶಿವಲೀಲಾ ಹುಲ್ಲೂರ, ಮಹಾದೇವಿ ಗುರಣ್ಣನವರ ಹಾಗೂ ಕಸ್ತೂರಿ ಅಗಸಿಮನಿ ಹಾಗೂ ಇತರರು ಧಾರವಾಡ ಉಸ್ತುವಾರಿ ಸಚಿವ ರಿಗೆ ಮನವಿಯನ್ನು ಸಲ್ಲಿಸುವ ಸಂಧಭ೯ದಲ್ಲಿ ಉಪಸ್ಥಿತರಿದ್ದರು.