Spread the love

ಧಾರವಾಡ :- ಅರಿವಿನ ಸ್ವರೂಪ ನೀಡುವ ಆಹಾರ ಮತ್ತು ಯೋಗ ಪದ್ದತಿ ಸುಲಭವಾಗಿದ್ದು ಇದು ದೈಹಿಕ ಹಾಗೂ ಮನೋನಿಯಂತ್ರಣ ಮಾಡುವ ವಿಧಾನವಾಗಿದೆ, ಇದು ವೈಚಾರಿವೂ ವ್ಯಜ್ಞಾನಿಕವೂ ಆಗಿದ್ದು ಮನಸ್ಸನ್ನು ಸಹಜ ಸ್ಥಿತಿಗೆ ತಂದು ಮಾನವನ ಬದುಕನ್ನು ಸಾರ್ಥಕತೆ ಹೊಂದುವAತೆ ಮಾಡುತ್ತದೆ ಎಂದು ಆಯುರ್ವೇದ ತಜ್ಞ ವೈದ್ಯೆ ಡಾ. ರಾಜೇಶ್ವರಿ ಶ್ರೀವತ್ಸ್ ನವಲೂರ ಹೇಳಿದರು.

ಶಹರದ ಚರಂತಿಮಠ ಗಾರ್ಡನದಲ್ಲಿಂದು ಶ್ರೀ ಬನಶಂಕರಿ ಭವನದ ೯ ನೇ ವಾರ್ಷಿಕೋತ್ಸವ ಹಾಗೂ ಬನಶ್ರೀ ಪ್ರಶಸ್ತಿ ಪ್ರಧಾನ ಮತ್ತು ಆಟೋ ಚಾಲಕರಿಗೆ ಗೃಹಪಯೋಗಿ ವಸ್ತು ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹಾಲಿನಲ್ಲಿ ತುಪ್ಪವಿದೆ ಎಂಬುದನ್ನು ನಾವು ಹೇಗೆ ತಿಳಿದುಕೊಳ್ಳುತ್ತೇವೆಯೋ ಹಾಗೆ ನಮ್ಮಲ್ಲಿರುವ ಆತ್ಮ ಚೈತನ್ಯದ ಅರಿವನ್ನು ತಿಳಿದುಕೊಳ್ಳಬೇಕು. ಹಾಲಿಗೆ ಉಪ್ಪು ಬೆರೆಸಿದಾಗ ಅದು ಮೊಸರಿನ ರೂಪ ಪಡೆಯುತ್ತದೆ ನಂತರ ಅದನ್ನು ತಿರುವಿನಲ್ಲಿ ಕಡೆಗೋಲಿಸಿದಾಗ ಅದು ಮಜ್ಜಿಗೆಯಾಗಿ ಮೇಲ್ಬಾಗದಲ್ಲಿ ಬೆಣ್ಣೆಯಾಗಿ ಕಾಣಿಸುತ್ತದೆ. ಬೆಣ್ಣೆಯನ್ನು ಕಾಯಿಸಿದಾಗ ತುಪ್ಪವಾಗಿ ಪರಿಣಮಿಸಿ ಘಮಘಮಿಸುತ್ತದೆ ಹೀಗೆ ಹಾಲಿಗೆ ಸಂಸ್ಕಾರ ಕೊಟ್ಟಾಗ ಬೆಣ್ಣೆಯ ಸ್ವರೂಪ ಪಡೆದುಕೊಳ್ಳುತ್ತದೆ. ಅದೇ ರೀತಿ ಮನುಷ್ಯನಿಗೆ ಆಹಾರ ಮತ್ತು ಯೋಗ ಪದ್ದತಿ ಅರಿವಿನ ಜ್ಞಾನ ಕೊಟ್ಟಾಗ ಆತ ಸಂಸ್ಕಾರ ಪಡೆದು ದೈಹಿಕ ಹಾಗೂ ಮಾನಸಿಕ ದೃಢತೆಯುಳ್ಳ ಮನುಷ್ಯನಾಗುತ್ತಾನೆ ಎಂದರು.

ಹಿರಿಯ ನ್ಯಾಯವಾದಿ ಪಿ.ಎಚ್.ನೀರಲಕೇರಿ ಸಾಧಕರಿಗೆ ಬನಶ್ರೀ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿ, ಸಮಾಜ ವ್ಯವಸ್ಥೆ, ವ್ಯಕ್ತಿ, ದುಡಿಮೆ, ವ್ಯವಹಾರ, ಆರ್ಥಿಕ ವ್ಯವಸ್ಥೆಯ ಏರುಪೇರುಗಳ ಆಗುಹೋಗುಗಳ ಪ್ರಜ್ಞೆ ಇರಬೇಕು. ವ್ಯಕ್ತಿಯ ಬದುಕು ಅನ್ಯಾಯ ಅಸಮಾನತೆ ಅವ್ಯವಸ್ಥೆಗಳಿಂದ ಕೂಡಿದ್ದಲ್ಲಿ ವ್ಯಕ್ತಿಯು ಅಸಾಹಾಯಕವಾಗಿ ಅನಿವಾರ್ಯವಾಗಿ ಬದುಕಿನ ಹಲವು ಸೌಲಭ್ಯಗಳಿಂದ ವಂಚಿತನಾಗುತ್ತಾನೆ. ಅದೇ ನ್ಯಾಯ ಸಮಾನತೆ ಸುವ್ಯಸ್ಥೆಯಿಂದ ಕೂಡಿದ ಸಮಾಜದಲ್ಲಿ ವ್ಯಕ್ತಿಯು ಸಮಾಜದಲ್ಲಿನ ಸಕಲ ಸೌಲಭ್ಯವನ್ನು ಪಡೆದುಕೊಂಡು ಸಮಾನವಾಗಿ ಸುಖಃ, ಸಂತೃಪ್ತಿ ಪಡೆಯುವನು. ಸಾಮಾಜಿಕ ಸ್ವರೂಪವು ಎಲ್ಲರ ಬಾಳಿನ ಎಲ್ಲಾ ಕ್ಷೇತ್ರದಲ್ಲಿ ಸಮತೆ ಸ್ವತಂತ್ರತೆಯಿರವಿರಬೇಕು ಆಗ ದೇಶ ಸುಖ ಶಾಂತಿ ಸಮೃದ್ದಿಗಳಿಂದ ಸಂಪದ್ಭರಿತವಾಗಿರುತ್ತದೆ ಎಂದರು.

ಶ್ರೀ ಬನಶಂಕರಿ ಭವನದ ಸಂಸ್ಥಾಪಕ ಶಿವಾನಂದ ಲೋಲೆನವರ ಅಧ್ಯಕ್ಷತೆವಹಿಸಿ ಮಾತನಾಡಿ, ನಮ್ಮ ಭವನದಲ್ಲಿ ಆಧ್ಯಾತ್ಮಿಕ ಚಿಂತನೆ, ಉಪನ್ಯಾಸ ಹಾಗೂ ಸತ್ಸಂಗ, ಪ್ರವಚನ, ಸಾಮಾಜಿಕ ಕಾರ್ಯಕ್ರಮದಲ್ಲಿ ಮಠಾಧೀಶರ ಹಾಗೂ ಜ್ಞಾನಿಗಳಿಂದ ಅನುಭಾವ ಒದಗಿಸುತ್ತಿದ್ದೇವೆ. ಈ ಬಾರಿ ೫ ಜನ ವಿಶಿಷ್ಟ ಸಾಧಕರಿಗೆ ಬನಶ್ರೀ ಪ್ರಶಸ್ತಿ ಪ್ರಧಾನ ಮಾಡಿದೆ ಜೊತೆಗೆ ನಿಷ್ಟಾವಂತ ಆಟೋ ಚಾಲಕರಿಗೆ ಗೃಹ ಉಪಯೋಗಿ ವಸ್ತು ನೀಡಿ ಸನ್ಮಾನಿಸಿ ವರ್ಷದುದ್ದಕ್ಕೂ ಅನೇಕ ಕಾರ್ಯಕ್ರಮ ರೂಪಿಸಿದೆ ಎಂದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಯಲಕ್ಷಿö್ಮÃ ಎಚ್, ಕಾಂಗ್ರೇಸ್ ಮುಖಂಡ ಸದಾನಂದ ಡಂಗನವರ ವೇದಿಕೆಯಲ್ಲಿದ್ದರು. ರವಿಕುಮಾರ ಆಶಯ ನುಡಿಗಳನ್ನಾಡಿದರು. ಡಾ.ಕಲ್ಮೇಶ ಹಾವೇರಿಪೇಟ, ಈಶ್ವರ ಸಾಣಿಕೊಪ್ಪ, ರಮೇಶ ಜಾನಕ್ಕಿ, ನಿಜನಗೌಡ ಪಾಟೀಲ, ಎಂ.ಎA.ಬೇಪಾರಿ ಇವರಿಗೆ ಬನಶ್ರೀ ಪ್ರಶಸ್ತಿ ಪ್ರಧಾನ ಮಾಡಿತು. ಪ್ರಭು ಹಂಚಿನಾಳ ನಿರೂಪಿಸಿದರು. ಲತಾ ದೇವಾಂಗದ ಸ್ವಾಗತಿಸಿದರು. ರಾಘವೇಂದ್ರ ವಂದಿಸಿದರು. ಸಮಾರಂಭದಲ್ಲಿ ೧೦ ಜನ ನಿಷ್ಟಾವಂತ ಆಟೋ ಚಾಲಕರಿಗೆ ಗೃಹ ಉಪಯೋಗಿ ವಸ್ತು ನೀಡಿ ಸನ್ಮಾನಿಸಿತು.