Spread the love

ಧಾರವಾಡ : ಕನಕದಾಸರು ಮಾನವೀಯ ಮೌಲ್ಯ ಒಳಗೊಂಡ ಜಾತಿ ಮತ ಪಂಥ ಭಾಷೆ ಗಡಿ ಮೀರಿ ಜಾಗತೀಕವಾಗಿ ಮೌಲ್ಯಗಳನ್ನು ಸಾರುವ ಅವರ ಚಿಂತನೆ ಸದಾ ಸ್ಪೂರ್ತಿಯಾಗಿದೆ.ಅವರ ತತ್ವಗಳು ಕೀರ್ತನೆಗಳನ್ನು ಆಳವಾಗಿ ಅಧ್ಯಯನ ಮಾಡಿದಾಗ ಮಾತ್ರ ಕನಕದಾಸರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಮನಸೂರಿನ ಸುಕ್ಷೇತ್ರ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಮಹಾಮಠದ ವಿದ್ಯಾಪೀಠದ ಪೂಜ್ಯ ಶ್ರೀ ಡಾ. ಬಸವರಾಜ ದೇವರು ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮನಸೂರ ಶ್ರೀ ರೇವಣ್ಣ ಸಿದ್ದೇಶ್ವರ ವಿದ್ಯಾಪೀಠ ಮಹಾಮಠ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ 536 ನೇ ಕನಕ ಜಯಂತಿ ಅಂಗವಾಗಿ ಆಯೋಜಿಸಿದ 5 ದಿನಗಳ ಕಾಲ ಆಯೋಜಿಸಿದ 2023 ನೇ ಕನಕ ಪಂಚಮಿ ಸಾಂಸ್ಕೃತಿಕ ಉತ್ಸವದಲ್ಲಿ ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,

ಗುರು ತೋರಿದ ಮಾರ್ಗಗಳಲ್ಲಿ ವಿನಯ, ವಿದೇಯತೆ, ಕಠಿಣ ಪರಿಶ್ರಮ, ಶಿಸ್ತು ವಿದ್ಯಾರ್ಥಿಗಳಲ್ಲಿ ಬಹಳ ಮುಖ್ಯ. ಕಷ್ಟ ಎಂದು ಹೇಳಿಕೊಂಡು ಬಂದವರಿಗೆ ಸಹಾಯ ಮಾಡಿ, ಯುವ ಪೀಳಿಗೆ ಮಾತ್ರ ಬಲಿಷ್ಠ ರಾಷ್ಟ್ರವನ್ನು ಪ್ರಗತಿ ಪತದಲ್ಲಿ ಕೊಂಡೊಯ್ಯೋಲು ಸಾಧ್ಯ, ಕನಕರ ಕೀರ್ತನೆಗಳನ್ನು ಮಾನ್ವಿಯ ಮೌಲ್ಯದ ಆಗಾರಗಳಾಗಿವೆ,ಕನಕದಾಸರ ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು ಸುಳ್ಳಾದಿಗಳು ಉಗಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸುವುದಲ್ಲದೆ ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಡಿಗೆಗಳ ರೂಪದಲ್ಲಿ ನೀಡಿದ್ದಾರೆ ಎಂದರು.

ಕನಕದಾಸರ 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ನಾವು ಕಾಣಬಹುದಾಗಿದೆ ಅವರ ಐದು ಕೃತಿಗಳಾದ ಮೋಹನ ತರಂಗಿಣಿ ನಳ ಚರಿತ್ರೆ ರಾಮಧ್ಯಾನ ಚರಿತ್ರೆ, ಅವಿಭಕ್ತಿಸಾರ ಕಾವ ಕೀರ್ತನಗಳು ಬಹುದೊಡ್ಡ ಕಾಣಿಕೆಗಳಾಗಿವೆ ಹತ್ತಾರು ವರ್ಷಗಳಿಂದ ಶ್ರೀಮಠವು ಕನಕರ ಸಾಹಿತ್ಯ ಸಂಸ್ಕೃತಿಯನ್ನು ಪ್ರಸಾರ ಮಾಡುತ್ತಾ ಕನಕರ ಸೇವೆ ಗೈಯುತ್ತಲಿದೆ ಎಂದು ಶ್ರೀಗಳ ನುಡಿದರು.

ಕನಕರ ಸಾಹಿತ್ಯದಲ್ಲಿ ವೈಚಾರಿಕ ನಿಲುವು ವಿಷಯವನ್ನು ಕರ್ನಾಟಕ ಮಹಾವಿದ್ಯಾಲಯದ ಡಾ, ಕೆ.ಎಸ್ ಕಟ್ಟಿಗಿ ಮಂಡಿಸಿದರು ಅದೇ ರೀತಿ ಕನಕರ ಕಾವ್ಯಗಳಲ್ಲಿ ಮಾನವೀಯ ಮೌಲ್ಯಗಳು ವಿಷಯವನ್ನು ಸೌದತ್ತಿಯ ಪ್ರಾಧ್ಯಾಪಕರಾದ ವಾಯ್, ಎಂ,ಯಾಕೊಳ್ಳಿ ಕನಕ ಕೀರ್ತನೆಗಳ ಸಾಹಿತ್ಯ ಮೌಲ್ಯ ವಿಷಯವನ್ನು ಮಂಡಿಸಿ ಕನಕರ ಸಾಹಿತ್ಯ ಒಟ್ಟು ಆಶಯ ಸಮಾಜದಲ್ಲಿ ಸಾಮರಸ್ಯ ಮೂಡಿಸುವುದು ಮಾನವೀಯ ಮೌಲ್ಯಗಳನ್ನು ಬಿತ್ತರಿಸುವುದು ಆ ಮೂಲಕ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸುವುದು ಕನಕರ ಬಯಕೆಯಾಗಿತ್ತು ಎಂದು ನುಡಿದರು.

ಕರ್ನಾಟಕ ವಿಶ್ವವಿದ್ಯಾಲಯದ ಸಂಯೋಜಕರಾದ ಡಾ. ಹನುಮಗೌಡ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ನಂತರ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಹಾಯಕ್ಕೆ ನಿರ್ದೇಶಕ ಕುಮಾರ್ ಬೆಕ್ಕೇರಿ ಮಾತನಾಡಿದರು.
ಕನ್ನಡ ಸಾಹಿತ್ಯ ಜಿಲ್ಲಾ ಪರಿಷತ್ ಜಿಲ್ಲಾಧ್ಯಕ್ಷರಾದ ಲಿಂಗರಾಜ್ ಅಂಗಡಿ ಹಾಗೂ ಡಾ. ನಿಂಗಪ್ಪ ಸೌನೂರ್ ಬಸವರಾಜ ಆನೆಗುಂದಿ, ಪ್ರಭು ಹಂಚಿನಾಳ,ಯಮನಪ್ಪ ಜಾಲಗಾರ,ಪ್ರಶಾಂತ ಲೋಕಾಪುರ, ರಮೇಶ್ ಕೊಡಕೇರಿ,ಸುರೇಶ ನಿಡಗುಂದಿ, ಆರ್ ಬಿ ಪಾಟೀಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಮಾ ಹಾವೇರಿ ತಂಡ, ಲಕ್ಷ್ಮಿದೇವಿ ಮಹಿಳಾ ಡೊಳ್ಳಿನ ತಂಡ, ಕಲಗೇರಿ ಸಂಗೀತ ಮಹಾ ವಿದ್ಯಾಲಯ ಧಾರವಾಡ, ಬೀರಲಿಂಗೇಶ್ವರ ಭಜನಾ ತಂಡ, ಶಿವ ಯೋಗೇಶ್ವರ ಸಂಘ ತಂಡದವರಿಂದ ಜಾನಪದ ಜೇಂಕಾರ ಶ್ರೀಧರ್ ಭಜಂತ್ರಿ ಕೃಷ್ಣ ಪ್ರಸಾದ್ ನೃತ್ಯ ಶಾಲೆ, ಧಾರವಾಡ ಹಾಗು ಇನ್ನಿತರ ಸಾಂಸ್ಕೃತಿಕ ಕಲಾತಂಡಗಳಿಂದ ಕಾರ್ಯಕ್ರಮದಲ್ಲಿ ಮನ್ಸೂರೆಗೊಂಡಿತು.

ಕಾರ್ಯಕ್ರಮದ ನಿರೂಪಣೆಯನ್ನು ಪ್ರಭು ಹಂಚಿನಾಳ,ಸುರೇಶ ಹಿರೇಣ್ಣವರ ಹಾಗೂ ರಮೇಶ ಕೊಂಡಕೇರಿ ವಂದಿಸಿದರು.