Spread the love

ಧಾರವಾಡ : ನಮೋ ನವಮತದಾರರ ಸಮಾವೇಶದ ಅಂಗವಾಗಿ ಇಂದು ಭಾರತೀಯ ಜನತಾ ಪಕ್ಷ ಧಾರವಾಡ ನಗರ 71 ಘಟಕದ ವತಿಯಿಂದ ಧಾರವಾಡದ ಕ್ಲಾಸಿಕ ಸ್ಟಡಿ ಸರ್ಕಲ್ ನಲ್ಲಿ ವರ್ಚುವಲ್ ಸಮಾವೇಶ ಜರುಗಿತು.
ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಯುವಮತದಾರರನ್ನ ಉದ್ದೇಶಿಸಿ ಮಾತನಾಡಿ, ದೇಶದ ಅಮೃತ ಕಾಲದಲ್ಲಿ ಯುವಕರು ಮತದಾನ ಮಾಡಲು ಅರ್ಹರಾಗಿದ್ದು ಭಾರತದ ಹಾಗೂ ತಮ್ಮ ಭವಿಷ್ಯ ನಿರ್ಧಾರ ಮಾಡುವ ಚುನಾವಣೆ ಇದಾಗಿದ್ದು, ತಮ್ಮ ಮತ ನಿರ್ಣಯ ಮಾಡುತ್ತೆ ಭಾರತದ ಆಡಳಿತ ಎಲ್ಲಿಗೆ ಸಾಗಲಿದೆಯೆಂದು ಹಾಗೂ ದೇಶದಲ್ಲಿ ಯುವಮತದಾರರ ಕೊಡುಗೆ ಅಪಾರವಾಗಿದ್ದು, ಕಡ್ಡಾಯವಾಗಿ ಮತದಾನ ಮಾಡಲು ಮನವಿ‌ ಮಾಡಿದರು.
ಪ್ರತಿಯೊಂದು ಮತ ಭಾರತವನ್ನ ಎಲ್ಲಾ ವಿಭಾಗದಲ್ಲಿ ವಿಶ್ವಕ್ಕೆ ಮಾದರಿಯಾಗಿಸುವುದು ಎಂದರು.‌
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ, ಮಾಜಿಮಹಾಪೌರ ಈರೇಶ ಅಂಚಟಗೇರಿ, ಭಾರತ ವಿಶ್ವದಲ್ಲೇ ಯುವ ದೇಶವಾಗಿದ್ದು, ಯುವ ಮತದಾರರ ದಿನದಂದು ನೂತನ ಮತದಾರರು ಭಾರತ ವಿಶ್ವಗುರುವಾಗುವ ನಿಟ್ಟಿನಲ್ಲಿ ಸಂಕಲ್ಪ ಮಾಡಬೇಕು. ದೇಶದ ಬೆಳವಣಿಗೆಯಲ್ಲಿ ಯುವಕರ ಪಾತ್ರ ಮಹತ್ತರವಾದದ್ದು. ನವ ಮತದಾರರಿಗೆ ಅಭಿನಂದನೆಗಳನ್ನು ಹೇಳಿದರು. .
ಕ್ಲಾಸಿಕ್ ಸಂಸ್ಥೆಯ ಮುಖ್ಯಸ್ಥ ಲಕ್ಷ್ಮಣ ಉಪ್ಪಾರ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ರಾಜಕಾರಣಿ ಇಂತಹ ಧೀಮಂತ ನಾಯಕನ ನೇತ್ರತ್ವದಲ್ಲಿ ತಾವು ಮತದಾನಕ್ಕೆ ಅರ್ಹರಾಗಿದ್ದು ಸೌಭಾಗ್ಯ ಎಂದರು.
ಜಿಲ್ಲಾಧ್ಯಕ್ಷರು ತಿಪ್ಪಣ್ಣ ಮಜ್ಜಗಿ ಮಾತನಾಡಿ, ದೇಶ ನಿರ್ಮಾಣ ಕಾರ್ಯಕ್ಕೆ ಯುವಕರ ಪಾತ್ರ ಮಹತ್ತರವಾದದ್ದು. ಯುವಕರ ಕಣ್ಮಣಿ ನರೇಂದ್ರ ಮೋದಿಯವರಿಗೆ ಮತ್ತೊಮ್ಮೆ ಅವಕಾಶ ನೀಡಿ ಭಾರತ ವಿಶ್ವಗುರುವಾಗುವ ನಿಟ್ಟಿನಲ್ಲಿ ಸಾಗಲು ಯುವಕರು ಮತದಾನ ಮಾಡುವದು ಅತಿ ಅವಶ್ಯಕ.
ತಮ್ಮ ಪ್ರತಿಯೊಂದು ಮತ ಭಾರತವನ್ನ ವಿಶ್ವಗುರು ಮಾಡುವುದರಲ್ಲಿ ಕೊಡುಗೆಯಾಗುವುದು ಎಂದರು.‌
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಾಜಿಮಹಾಪೌರ ಈರೇಶ ಅಂಚಟಗೇರಿ, ಸುನೀಲ‌ಮೋರೆ, ಕ್ಲಾಸಿಕ ಸಂಸ್ಥ ಮುಖ್ಯಸ್ಥರು ಲಕ್ಷ್ಮಣ ಉಪ್ಪಾರ, ಈರಣ್ಣ ಹಪ್ಪಳಿ, ಟಿ ಎಸ ಪಾಟೀಲ‌, ಶ್ರೀನಿವಾಸ ಕೋಟ್ಯಾನ, ಹರೀಶ ಬಿಜಾಪುರ, ಶಂಕರ ಶೇಳಕೆ, ಅನಿತಾ ಚಳಗೇರಿ ರತ್ನಾಬಾಯಿ ನಾಝರೆ,
ಮಂಜು ಕಮ್ಮಾರ, ಬಸವರಾಜ ರುದ್ರಾಪುರ, ಶಕ್ತಿ ಹಿರೇಮಠ, ಬಸವರಾಜ ಕುಪ್ಪಸಗೌಡರ, ಸುಜಾತಾ ಉಪಸ್ಥಿತರಿದ್ದರು.