Spread the love

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಪಾಲಿಕೆಯ ವಾಡ್೯ ನಂ 26 ರ , ಸುತಗಟ್ಟಿಯ ಶ್ರೀ ವೀರಭದ್ರೇಶ್ವರ : 13 ನೇ ರಥೋತ್ಸವದ ಜಾತ್ರಾ ಮಹೋತ್ಸವವು ಇಂದು ದಿ 20 ರಿಂದ 26 ರವರೆಗೆ ನಡೆಯಲಿದೆ.

ದಿ. 20 ರ ಸಂಜೆ 6:00 ಗಂಟೆಗೆ ಪ್ರವಚನ ಕಾರ್ಯಕ್ರಮದ ಉದ್ಘಾಟನೆ ಸನ್ನಿಧಿಯನ್ನು ಶ್ರೀ ಷ . ಬ್ರ . ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ಕಾಶಿ ಕಾಸ ಶಾಖಾಮಠ : ಪಂಚಾಕ್ಷರಿನಗರ , ನವನಗರ ವಹಿಸಲಿದ್ದು, ಅಧ್ಯಕ್ಷತೆ ಶ್ರೀ ಕಲ್ಲಯ್ಯ ಜಿ . ಮೂಕಶಿವಯ್ಯನವರ , ಸಮುಕ ಶ್ರೀ ವೇ.ಮೂ. ಬಸಯ್ಯ ಹಿರೇಮಠ ವಹಿಸುವರು.

ಉದ್ಘಾಟನೆಯನ್ನು ಪಾಲಿಕೆಯ ಸದಸ್ಯರಾದ ನೀಲವ್ವ .ಯ , ಅರವಾಳ ಅತಿಥಿಗಳಾಗಿ ಗ್ರಾಮದ ಗುರುಹಿರಿಯರು , ದಾನಿಗಳು ಆಗಮಿಸುವರು.

ಪ್ರವಚನಕಾರರಾಗಿ ಪಂಡಿತ್‌ ಡಾ | ಪುಟ್ಟರಾಜ ಕವಿಗವಾಯಿಗಳ ಶಿಷ್ಯರಾದ ಶ್ರೀ ವೇ.ಮೂ.ಶಿವಕುಮಾರ ಶಾಸ್ತ್ರಿಗಳು ಬೀರವಳಿ , ಹಾರಮೋನಿಯಂ ಸಂಗಮೇಶ ಆಲಮೇಲ , ತಬಲಾ ಪಂಚಾಕ್ಷರಿ ಯಲಬುರ್ಗಾ ಇವರಿಂದ ಜರುಗುವುದು.

ದಿ. 21 ರಂದು ಸಂಜೆ 6 ಗಂಟೆಗೆ ಪ್ರವಚನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ
ಸಂಸದೀಯ ವ್ಯವಹಾರಗಳು , ಕಲ್ಲಿದ್ದರು ಮತ್ತು ಗಣಿಗಳ ಕೇಂದ್ರ ಸಚಿವರಾದ. ಪ್ರಹ್ಲಾದ ಜೋಶಿ, ವಿರೋಧ ಪಕ್ಷದ ಉಪನಾಯಕರಾದ ಅರವಿಂದ ಬೆಲ್ಲದ ಆಗಮಿಸಲಿದ್ದು ದಾನಿಗಳಿಗೆ ಗಣ್ಯರಿಗೆ ಸನ್ಮಾನ ನಡೆಯಲಿದೆ.

ದಿ. 24 ರಂದು ಪ್ರವಚನದ ಸಮಾರೋಪ ಸಮಾರಂಭ ಸನ್ನಿಧಿವನ್ನು , ಶ್ರೀ ಗುರು ಮ.ನಿ.ಪ , ಅಭಿನವ ಮೃತ್ಯುಂಜಯ ಸ್ವಾಮಿಗಳು ಸುಕ್ಷೇತ್ರ ಮಣಕವಾಡ , ಸಮುಕ ಶ್ರೀ ವೇ . ಮ ಚನ್ನಯ್ಯ ಹಿರೇಮಠ , ಅಧ್ಯಕ್ಷತೆ ಶ್ರೀ ಈರಪ್ಪ ಎಂ . ಹಳವೂರ , ಮುಖ್ಯ ಅತಿಥಿಗಳಾಗಿ ಗ್ರಾಮದ ಹಿರಿಯರು ಉಪಸ್ಥಿತರಿರುವರು ಅಂದು ರಾತ್ರಿ 10 ರಿಂದ ಭಜನಾ ಜಾಗರಣೆ ಶ್ರೀ ಗ್ರಾಮದೇವಿ ಭಜನಾಮೇಳ ಹಾಗೂ ಕೋಲಾಟ ಮೇಳದವರಿಂದ ಜರುಗುವುದು ,

ದಿ.: 25 ರಂದು ಬೇಳಿಗ್ಗೆ 6 ಗಂಟೆಗೆ ಗುಗ್ಗಳ ಮಹೋತ್ಸವ ಸುರಣಗಿ ಗ್ರಾಮದ ಪುರವಂತರ ಸಮೇತ ಕುಂಭ ಮೇಳ ಕರಡಿ ಮೇಳದೊಂದಿಗೆ ಜರುಗುವುದು , ಮಧ್ಯಾಹ್ನ 12 ಗಂಟೆಗೆ ಮಹಾಪ್ರಸಾದ 3 ಗಂಟೆಗೆ ವಿವಿಧ ವಾದ್ಯಮೇಳಗಳೊಂದಿಗೆ ಪಲ್ಲಕ್ಕಿ , ನಂದಿಕೋಲ ಮೆರವಣಿಗೆ , ಸಂಜೆ 5 ಗಂಟೆಗೆ ರಥೋತ್ಸವ , ದಿ 26 ರಂದು ಸಂಜೆ 6 ಗಂಟೆಗೆ ಕಡುಬಿನಕಾಳಗದ ಅಂಗವಾಗಿ ಪಲ್ಲಕ್ಕಿ ಉತ್ಸವ , ಕಡುಬಿನ ಪ್ರಸಾದ ವಿತರಣೆ , ರಾತ್ರಿ 10 ಗಂಟೆಗೆ “ ಸಿರಿತನಕ್ಕೆ ಸಿಡಿದೆದ್ದ ಹುಲಿ ” ಎಂಬ ನಾಟಕ ಪ್ರದರ್ಶನ ಜರುಗುವುದು .

ಈ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು , ದಾನಿಗಳು ಆಗಮಿಸುವರು . ಕಾರಣ ಸಕಲ ಸದ್ಭಕ್ತರು ಎಲ್ಲಾ ಕಾರ್ಯಕ್ರಮಗಳಿಗೆ ಆಗಮಿಸುವಂತೆ ಸುತಗಟ್ಟಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರು,ಕಾಯ೯ದಶಿ೯ ಹಾಗೂ ಪದಾಧಿಕಾರಿಗಳು ಕೋರಿದ್ದಾರೆ.