Spread the love

ಧಾರವಾಡ : ಧಾರವಾಡದ ಇನ್ಟ್ಯಾಕ್ (INTACH) ಚಾಪ್ಟರ್ ವತಿಯಿಂದ ಶಾಲಾ ಮಕ್ಕಳಿಗಾಗಿ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ತಿಳಿಸುವ ನಿಟ್ಟಿನಲ್ಲಿ ಮಕ್ಕಳಿಗಾಗಿ ಪೋಸ್ಟರ್ ಮೇಕಿಂಗ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪುರಾತನ ಕಟ್ಟಡಗಳನ್ನು ಹಾಗೂ ಸ್ಮಾರಕಗಳನ್ನು ಕಾಪಾಡಿಕೊಂಡು ಹೋಗುಲು ಇದೊಂದು ಉತ್ತಮ ಪ್ರಯತ್ನ ಎಂದು ಸಂಚಾಲಕ ಡಾಕ್ಟರ್ ಕರ್ನಲ್ ಮೋಹನ್ ಮಠ ತಿಳಿಸಿದರು. ಇಲ್ಲಿಯ ಸರ್ಕಾರಿ ಆಟ ಗ್ಯಾಲರಿಯಲ್ಲಿ ಧಾರವಾಡ ಇಂಟ್ಯಾಕ್ ಚಾಪ್ಟರು ಏರ್ಪಡಿಸಿದ ಪೋಸ್ಟರ್ ಚಿತ್ರಕಲಾ ಸ್ಪರ್ಧೆಯಲ್ಲಿ ಅವರು ಮಾತನಾಡಿದರು. ಇಂತಹ ಸ್ಪರ್ಧೆಗಳಿಂದ ಮಕ್ಕಳು ಕಲ್ಪನಾ ಶಕ್ತಿಯನ್ನು ಬೆಳೆಸಿಕೊಳ್ಳಬಹುದೆಂದು ಶ್ರೀ ಜಿ ಸಿ ತಲ್ಲೂರ ತಿಳಿಸಿದರು.

ಆರ್ಟ್ ಗ್ಯಾಲರಿಯ ಪ್ರಾಚಾರ್ಯರಾದ ಡಾ. ಬಸವರಾಜ್ ಕುರಿಯವರು ಮಕ್ಕಳಿಗೆ ಪೋಸ್ಟರ್ ಚಿತ್ರಕಲೆ ಸ್ಪರ್ಧೆಯ ಬಗ್ಗೆ ಮಾಹಿತಿ ನೀಡಿದರು. ಅದರಂತೆ ಶ್ರೀ ಸುರೇಶ್ ಹಾಲಭಾವಿ ಚಿತ್ರಕಲೆ ಕುರಿತು ಮಾರ್ಗದರ್ಶನವನ್ನು ನೀಡಿದರು. ಈ ಸ್ಪರ್ಧೆಯಲ್ಲಿ ಧಾರವಾಡ ಶಹರದ ಹತ್ತು ಶಾಲೆಗಳ 110 ವಿದ್ಯಾರ್ಥಿ ವಿದ್ಯಾರ್ಥಿನಿಯರು ಆಸಕ್ತಿಯಿಂದ ಭಾಗವಹಿಸಿದ್ದರು ಹಾಗೂ ಶಿಕ್ಷಕರು ಮತ್ತು ಪಾಲಕರು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಸಹ ಸಂಚಾಲಕ ತಿಮ್ಮಾಪುರ, ಕೃಷ್ಣ ಹೂಗಾರ್ ಡಾಕ್ಟರ್ ಏನ್ ಬಿ ನಾಲತವಾಡ, ರೇಖಾ ಶೆಟ್ಟರ, ಡಾಕ್ಟರ್ ರಾಜ್ಶ್ರೀ ಗುದಗನವರ, ಶ್ರೀ ಸುರೇಶ್ ಗುದಗನವರ ಮುಂತಾದವರು ಉಪಸ್ಥಿತರಿದ್ದರು.