Spread the love

ಧಾರವಾಡ : ಪ್ರತಿಭೆಯನ್ನು ಬಿಂಬಿಸಿಕೊಳ್ಳಲು ಸಾಂಸ್ಕೃತಿಕ ವೇದಿಕೆಗಳನ್ನು ಸಮರ್ಪಕವಾಗಿ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಎ. ಚೆನ್ನಪ್ಪ ಅಭಿಪ್ರಾಯಪಟ್ಟರು.

ಅವರು ಇಲ್ಲಿನ ಕರ್ನಾಟಕ ವಿಜ್ಞಾನ ಕಾಲೇಜಿನ ಸೃಜನಾ ರಂಗಮಂದಿರದಲ್ಲಿ 2023-24ನೇ ಸಾಲಿನ ಕಾಲೇಜಿನ ಜಿಮಖಾನ ಕಾರ್ಯಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಒದಗಿದ ಅವಕಾಶಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಿ, ವಿದ್ಯಾರ್ಥಿಗಳು ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೊಂಡು ಸಾಧನೆ‌ಗೆ ಮುಂದಾಗಬೇಕು ಎಂದ ನಿಮ್ಮ ಆಸಕ್ತಿ ಕ್ಷೇತ್ರವನ್ನು ಆಯ್ಕೆಮಾಡಿಕೊಂಡು ಆ ಕ್ಷೇತ್ರದಲ್ಲಿ ಮುನ್ನುಗಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ರಾಷ್ಟ್ರಪತಿ ಪದಕ ವಿಜೇತ ಯುತ್ ಐಕಾನ್ ಆಂದ್ರಪ್ರದೇಶದ ಬಿಸಾಥಿ ಭರತ ಮಾತನಾಡಿ….ವಿದ್ಯಾರ್ಥಿ ಜೀವನ ಘಟ್ಟ ತುಂಬಾ ‌ಮಹತ್ವ ಪಡೆದಿದೆ. ಸಮಯ ಮತ್ತು ಪರಿಶ್ರಮ ವಿದ್ಯಾರ್ಥಿ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ದೇಶ ಶೇಕಡಾ 60ರಷ್ಟು ಯುವ ಜನರು ಹೊಂದಿದ್ದು, ದೇಶ ಕಟ್ಟುವಲ್ಲಿ ಯುವ ಸಮುದಾಯ ಪಾತ್ರ ಬಹಳ ಇದ್ದು, ಭಾರತವನ್ನು ‘ಗ್ಲೋಬಲ್ ಸುಪರ್ ಪಾವರ್’ ದೇಶವನ್ನಾಗಿ ಮಾಡಬೇಕಾಗಿದೆ ಎಂದರು. ಡಿಜಿಟಲ್ ತಂತ್ರಜ್ಞಾನವನ್ನು ಪೂರಕವಾಗಿ ಬಳಸಿಕೊಳ್ಳಿ
ಕೀಳಿರಿಮೆಯನ್ನು ತೊರೆದು ನಿಮ್ಮ ಸಾಮರ್ಥ್ಯವನ್ನು ಅರಿತುಕೊಂಡರೆ ಸಾಧನೆ ಮಾಡಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕರ್ನಾಟಕ ವಿಜ್ಞಾನ ಕಾಲೇಜಿನ ಹಳೆಯ ವಿದ್ಯಾರ್ಥಿ ಭೂ-ವಿಜ್ಞಾನಿ ಅಕ್ಷಯ ನಾಡಗೌಡರ ಮಾತನಾಡಿ…ನಾನೊಬ್ಬ ಸಾಮಾನ್ಯ ವಿದ್ಯಾರ್ಥಿ ಆಗಿದ್ದು, ನನ್ನ ವ್ಯವಸ್ಥಿತ ಅಧ್ಯಯನ ಮತ್ತು ನಿರಂತರ ಪರಿಶ್ರಮದಿಂದ ಭೂ ವಿಜ್ಞಾನ ವಿಷಯದಲ್ಲಿ ಲೋಕಸೇವಾ ಆಯೋಗದ ಪರೀಕ್ಷೆ ಉತ್ತಿರ್ಣನಾದೆ ಎಂದು ವಿದ್ಯಾರ್ಥಿಗಳ ಜೊತೆಗೆ ತಮ್ಮ ಅನುಭವ ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಡಾ. ಎಮ್.ಎಸ್. ಸಾಳುಂಕೆ ಮಾತನಾಡಿ… ಸಮಯವನ್ನು ಪರಿಣಾಮಕಾರಿ ಬಳಸಿಕೊಳ್ಳು ಮೂಲಕ ಅಧ್ಯಯನ ಮಾಡಿ, ಸಹನೆಯ ಮೂಲಕ ಸಾಧನೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕೀವಿಮಾತು ಹೇಳಿದ ಅವರು ಕರ್ನಾಟಕ ಕಾಲೇಜು ರಾಜಕಾರಣಿ ಸೇರಿದಂತೆ ಅನೇಕ ಅಧಿಕಾರಿಗಳನ್ನು, ಸಾಹಿತ್ಯಕಾರರನ್ನು ಸಮಾಜಕ್ಕೆ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಮಾಖಾನದ ಉಪಾಧ್ಯಕ್ಷರಾದ ಡಾ.ಜಗದೀಶ್ ಗುಡಗೂರ, ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿ ಡಾ.ವಿ.ಬಿ.ಸಾವಿರಮಠ, ಡಾ.ಡಿ.ಬಿ.ಗೋವಿಂದಪ್ಪ, ವಿದ್ಯಾರ್ಥಿ ಕಾರ್ಯದರ್ಶಿ ಸ್ನೇಹಾ.ಎಸ್.ಆಯ್ ಸೇರಿದಂತೆ ಕಾಲೇಜಿನ ವಿವಿಧ ವಿಭಾಗದ ಪ್ರಾಧ್ಯಾಪಕರು ಹಾಜರಿದ್ದರು.