Spread the love

ಧಾರವಾಡ : ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮವನ್ನು ,ದಿ 21. ರಂದು,ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ಜಿಲ್ಲೆ ಇವರ ನೇತೃತ್ವ ಹಾಗೂ ಧಾರವಾಡ ಜಿಲ್ಲಾ ಗಂಗಾಮತಸ್ಥರ ಹಿತರಕ್ಷಕ ಸಂಘದ ಸಹಯೋಗದೊಂದಿಗೆ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಭವನದಲ್ಲಿ ಆಚರಿಸಲಾಗುವುದು
ಮುಂಜಾನೆ ಒಂಭತ್ತು ಗಂಟೆಗೆ,ಧಾರವಾಡದ ಹೊಸಯಲ್ಲಾಪೂರದಲ್ಲಿರುವ ಸುಣಗಾರ ಭಟ್ಟಿಯಲ್ಲಿರುವ ಗಂಗಾಪರಮೇಶ್ವರಿಗೆ ಸಮಾಜದ ಗುರುಹಿರಿಯರ ನೇತೃತ್ವದಲ್ಲಿ ಪೂಜೆಸಲ್ಲಿಸಲ್ಲಿಸಲಾಗುವದು.ನಿಜಶರಣ ಅಂಬಿಗರ ಚೌಡಯ್ಯನವರ ಪ್ರತಿಮೆಯನ್ನು ಶೃಂಗಾರಗೊಳಸಿ,ಕುಂಭಮೇಳ,ಹಾಗೂ ಸಕಲ ವಾದ್ಯಮೇಳಗಳೊಂದಿಗೆ ಬೃಹತ್ ಶೋಭಾ ಯಾತ್ರೆಗೆ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿಯವರು ಚಾಲನೆ ನಿಡುವರು. ಚಾಲನೆಗೊಂಡ ಶೋಭಾಯಾತ್ರೆಯು ಹೊಸ ಯಲ್ಲಾಪೂರ ಮುಖ್ಯ ರಸ್ತೆ, ಕಾಮನಕಟ್ಟಿ,ಸುಣಗಾರ ಓಣಿ ,ಗಾಂಧಿ ಚೌಕ ಮೂಲಕ ಕೆಸಿಸಿ ಬ್ಯಾಂಕ,ಸುಭಾರಸ್ತೆ,ವಿವೇಕಾನಂದ ಸರ್ಕಲ್,ಅಂಜುಮನ್ ಸರ್ಕಲ್,ಜುಬಲಿ ಸರ್ಕಲ್ ಮುಖಾಂತರವಾಗಿ ಆಲೂರ ವೆಂಕಟರಾವ ಭವನದಲ್ಲಿ ಸಮಾರೋಪಗೊಳ್ಳುವದು.
ಮಧ್ಯಾಹ್ನ 12 ಗಂಟೆಗೆ ವೇದಿಕೆ ಕಾರ್ಯಕ್ರಮ ಜರುಗುವುದು.
ವೇದಿಕೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ,ಸಭಾತಿಗಳಾದ ಬಸವರಾಜ ಹೊರಟ್ಟಿ,ಕಾರ್ಮಿಕ ಸಚಿವರಾದ ಸಂತೋಷ ಲಾಡ,ಸರ್ಕಾರದ ಮುಖ್ಯ ಸಚೇತಕರು,ವಿಧಾನ ಪರಿಷತ್ ಸದಸ್ಯರಾದ ಸಲೀಮ ಅಹ್ಮದವರು,ವಿಧಾನ ಪರಿಷತ್ ಸದಸ್ಯರಾದ ಜಗದೀಶ ಶೆಟ್ಟರ,ಶಾಸಕರಾದ ವಿನಯ ಕುಲಕರ್ಣಿ,ಮಹೇಶ ಟೆಂಗನಕಾಯಿ, ಪ್ರಸಾದ ಅಬ್ಬಯ್ಯ, ಎನ್ ಎಚ್ ಕೋನರಡ್ಡಿ, ಎಮ್ ಆರ್ ಪಾಟೀಲ,ಹಾಗೂ ವಿಧಾನ ಪರಿಷತ್ ಸದಸ್ಯರುಗಳು ಹಾಗೂ ಪೂಜ್ಯ ಮಹಾಪೌರರು,ಉಪಮಹಾ ಪೌರರು ಭಾಗವಹಿಸುವರು.ಅಧ್ಯಕ್ಷತೆಯನ್ನು ಮಾನ್ಯ ಶಾಸಕರಾದ ಅರವಿಂದ ಬೆಲ್ಲದವರು ವಹಿಸುವರು.ಗಂಗಾಮತ ಸಮಾಜದ ಜಿಲ್ಲಾ ಅಧ್ಯಕ್ಷರಾದ ಅರವಿಂದ ಏಗನಗೌಡರ,ಪ್ರಧಾನ ಕಾರ್ಯದರ್ಶಿ ಅಶೋಕ ಬೆಸ್ತ,ಉಪಾಧ್ಯಕ್ಷರಾದ ಗುರಪ್ಪ ಜಿಡ್ಡಿ,ಖಜಾಂಚಿ ಯಲ್ಲಪ್ಪ ಸುಣಗಾರ,ತಾಲೂಕ ಅಧ್ಯಕ್ಷ ಮಂಜುನಾಥ ಭೀಮಕ್ಕನವರ ವೇದಿಕೆಯಲ್ಲಿ‌ ಉಪಸ್ಥಿತರಿರುವರು.

ಸಮಸ್ಥ ಗಂಗಾತ ಸಮಾಜ ಬಾಂಧವರು,ಮುಖಂಡರು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಈ‌ ಮೂಲಕ ಅರವಿಂದ ಏಗನಗೌಡರ ಪ್ರಕಕಟನೆಯಲ್ಲಿ ವಿನಂತಿಸಿದ್ದಾರೆ.