Spread the love

ಹೆಬ್ಬಳ್ಳಿ ದಾಲಪಟ ಕಲೆ ಇದೊಂದು ಸಾಹಸ ಕ್ರೀಡೆಯಾಗಿದೆ ಜೊತೆಗೆ ಇದು ಜನಪದ ಕ್ರೀಡೆ ಮನಸ್ಸುನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಆಡುವ ವಿಶಿಷ್ಟವಾದ ಕಲೆಯಾಗಿದೆ.ಇದುಇಪ್ಪತ್ತು ವರ್ಷಗಳಿಂದ ಈ ಕ್ರೀಡೆ ಮಾಯವಾಗಿದೆ.ಈ ಕಲೆಯನ್ನು ಉಳಿಸಿ ಬೆಳೆಸುವುದು ಅಗತ್ಯವಿದೆ ಎಂದು ಹೆಬ್ಬಳ್ಳಿ  ಪಂಚಾಯತ್ ಅಧ್ಯಕ್ಷ ನಿಂಗಪ್ಪ ಮೊರಬದ ಅವರು ಅಭಿಪ್ರಾಯಪಟ್ಟರು.

ಅವರು ಗ್ರಾಮದ ಗೌರಿ ಗುಡಿಯ ಮುಂದೆ ಹೆಬ್ಬಳ್ಳಿ ಗ್ರಾಮದ ಬ್ರಹ್ಮಪುರಿ ಸಾಂಸ್ಕೃತಿಕ ಬಳಗದ ಆಶ್ರಯದಲ್ಲಿ ಜರುಗಿದ.ದಾಲಪಟ ಕಲಾವಿದರು ಸಂಘಟನೆ ಉದ್ದಾಟನೆ ಮತ್ತು ಕಲಾವಿದರು ಗಳಿಗೆ  ಪದಗ್ರಹಣ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳು ದುಷ್ಟ ಚಟಗಳಿಂದ ದೂರವಿದ್ದು ದಾಲಪಟ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕು ಎಂದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಸತೀಶ್ ತುರಮರಿ ಅವರು ಮಾತನಾಡಿ ದಾಲಪಟ ಕಲೆಯ ತವರೂರು ಹೆಬ್ಬಳ್ಳಿ ಗ್ರಾಮವಾಗಿದೆ ಭಜನೆ ಹಾಡುಗಳು ಹುಲಿಯು ಹುಟ್ಟಿತ್ತು ಕಿತ್ತೂರಿನ ನಾಡಿನಾಗ ಹೀಗೆ ಹಲವಾರು ಗೀತೆಗಳು ಪ್ರಸಿದ್ಧಿ ಪಡೆದಿವೆ ಎಂದು ತಿಳಿಸಿದರು

ಈ ಕಾರ್ಯಕ್ರಮದ ಸಾನ್ನಿಧ್ಯ ಯೋಗಾನಂದ ಮಹಾಸ್ವಾಮಿಗಳು ವಹಿಸಿದ್ದರು.

ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಹಿರಿಯರು ಯುವಕರು ಕಲಾವಿದರು ಉಪಸ್ಥಿತರಿದ್ದರು.