Spread the love

ಮನಸ್ಸಿಗೆ ಅತ್ಯುತ್ತಮ ಸಂಸ್ಕಾರ ನೀಡುವುದು ಅವಶ್ಯ

ಧಾರವಾಡ: ಇಂದಿನ ದಿನಮಾನಗಳಲ್ಲಿ ಮನಸ್ಸಿಗೆ ಸಂಸ್ಕಾರ ನೀಡುವಂತಹ ಕಾರ್ಯಕ್ರಮಗಳು ಹೆಚ್ಚು ನಡೆದಲ್ಲಿ  ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅಮ್ಮಿನಬಾವಿ ಪಂಚ ಗ್ರಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.

ನಗರದ ಮಂಗಳವಾರ ಪೇಟೆಯ ಹಿರೇಮಠ ಓಣಿಯಲ್ಲಿ ಏರ್ಪಡಿಸಲಾಗಿದ್ದ ವೀರಭದ್ರೇಶ್ವರ ಗುಗ್ಗುಳೊತ್ಸವ ಹಾಗೂ ಚೆನ್ನಯ್ಯ ಸ್ವಾಮಿ ಮಂದಿರ 21ನೇ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಧರ್ಮ ಹಾಗೂ ಅಧ್ಯಾತ್ಮದ ಸಂರಕ್ಷಣೆ ಅತ್ಯವಶ್ಯವಾಗಿದೆ . ಇದು ಕೇವಲ ವೇದಿಕೆಗಳಿಗೆ ಮಾತ್ರ ಸೀಮಿತವಾಗುತ್ತಾ ಬರುತ್ತಿದ್ದು ಇದರಿಂದ ಯಾವುದೇ ಪ್ರಯೋಜನವಿಲ್ಲ ಬದಲಾಗಿ ಮನಸ್ಸಿಗೆ ಸಂಸ್ಕಾರ ನೀಡುವ ಧಾರ್ಮಿಕ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಜನರ ಮನಸ್ಸಿನಲ್ಲಿ ಧರ್ಮ ಸಂಸ್ಕೃತಿ ಪರಂಪರೆ ದೇಶಭಕ್ತಿಯನ್ನು ಜಾಗ್ರತಿ ಗೊಳಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಮುಂದಾಗಬೇಕಿದೆ ಎಂದರು.

ಕೇವಲ ದೊಡ್ಡ ದೊಡ್ಡ ಕಾರ್ಯಕ್ರಮಗಳಿಂದಲೆ ಪರಿವರ್ತನೆ ಆಗುತ್ತದೆ ಎಂಬುದು ನಮ್ಮ ಕಲ್ಪನೆ ಆಗಬಾರದು . ಸದಾಕಾಲ ನಮ್ಮನ್ನು ಜಾಗೃತಿ ಮನಸ್ಥಿತಿಯಲ್ಲಿ ಇಡುವಂತೆ ಸಣ್ಣ ಸಣ್ಣ ಕಾರ್ಯಕ್ರಮಗಳು ಸಹ ಅತ್ಯಂತ ಅವಶ್ಯಕವಾಗಿವೆ .ಒಬ್ಬ ವ್ಯಕ್ತಿ ಸಾಧನೆ ಮಾಡಬೇಕಾದರೆ ಅವನಿಗೆ ಉತ್ತಮ ಮನಸ್ಸು ಸದಾಕಾಲ ಜಾಗೃತಿ ಮನಸ್ಥಿತಿಯಲ್ಲಿ ಇರಬೇಕಾಗುತ್ತದೆ ಅದೇ ರೀತಿ ಒಬ್ಬ ಮನುಷ್ಯ  ಸಮಾಜಘಾತಕ ವರ್ತಿಸ ಬೇಕಾದರೆ

ಅದಕ್ಕೂ ಕೂಡ ಮನಸ್ಸು ಕಾರಣವಾಗಿದೆ.ಮನಸ್ಸು  ಒಂದು ರೀತಿಯ ಬಿಳಿ ಹಾಳೆಯ ಇದ್ದಂತೆ ಇಲ್ಲಿ ಏನು ಬೀಜ ಬೀತ್ತೇವೆಯೋ  ಅದೇ ಮರವಾಗಿ ಬೆಳೆಯುತ್ತದೆ ಆದ್ದರಿಂದ ಮನಸ್ಸಿಗೆ ಸಂಸ್ಕಾರ ನೀಡಿದಲ್ಲಿ  ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ ಎಂದರು.