Spread the love

ಎ.ಐ.ಎಮ್.ಎಸ್.ಎಸ್‌ ನ ೭ನೇ ರಾಜ್ಯಮಟ್ಟದ ಮಹಿಳಾ ಸಮ್ಮೇಳನ

ಧಾರವಾಡ : ಎ.ಐ.ಎಮ್.ಎಸ್.ಎಸ್‌ ಮತ್ತು ಸಮಾಜಶಾಸ್ತ್ರದ ವಿಭಾಗ ಹಾಗೂ ಪ್ರಗತಿಪರ ಮಹಿಳಾ ವೇದಿಕೆಯಿಂದ ಜಂಟಿಯಾಗಿ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ಜಿಗಳೂರು ಮತ್ತು ಶೇಷಗಿರಿ ಮಹಿಳಾ ಸಮ್ಮೇಳನಕ್ಕೆ ಪೂರಕವಾಗಿ “ಆಧುನಿಕ ಮಹಿಳೆಯರು ಎದುರಿಸುತ್ತಿರುವ ಸವಾಲುಗಳು-ಸಮಸ್ಯೆಗಳು ಮತ್ತು ಪರಿಹಾರ ಕ್ರಮಗಳು” ಎಂಬ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಎ.ಐ.ಎಮ್.ಎಸ್.ಎಸ್‌ ನ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಮಧುಲತಾ ಗೌಡರ ವಿದ್ಯಾರ್ಥಿನಿಯರನ್ನು ಉದ್ದೇಶಸಿ ಮಾತನಾಡುತ್ತಾ “ದೇಶಕ್ಕೆ ಸ್ವಾತಂತ್ರ ಬಂದು ೭೫ ವರ್ಷಗಳೇ ಕಳೆದಿವೆ ಆದರೆ ಮಹಿಳೆಯನ್ನು ನೋಡುವ ದೃಷ್ಟಿಕೋನ ಮಾತ್ರ ಬದಲಾಗಿಲ್ಲ.

ಇಂದಿಗೂ ನಾನಾ ತರಹದ ದೌರ್ಜನ್ಯಗಳಿಗೆ ಮಹಿಳೆಯನ್ನು ತುತ್ತಾಗುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ.ಹೆಣ್ಣು ಬ್ರೂಣ ಹತ್ಯೆ,ಬಾಲ್ಯ ವಿವಾಹ,ಹಸುಳೆ-ವೃದ್ಧೆಯೆನ್ನದೇ ಹೆಚ್ಚುತ್ತಿರುವ ಅತ್ಯಾಚಾರ-ಗುಂಪು ಅತ್ಯಾಚಾರ,ಆಸಿಡ್‌ ದಾಳಿಗಳು, ಹೆಣ್ಣು ಮಕ್ಕಳು ಕಳ್ಳಸಾಗಣೆ, ಬೆತ್ತಲೆ ಮೆರವಣಿಗೆ ಹೀಗೆ ಹಲವಾರು ರೂಪಗಳಲ್ಲಿ ಶೋಷಣೆಗಳು ತಾಂಡವವಾಡುತ್ತಿವೆ ಎನ್‌. ಸಿ.ಆರ್‌.ಬಿ ವರದಿ ಪ್ರಕಾರ ದೇಶದಲ್ಲಿ ಪ್ರತಿ ೧೧ ನಿಮಿಷಕ್ಕೆ ಒಬ್ಬ ಮಹಿಳೆ, ದಿನಕ್ಕೆ ೯೦ ಮಕ್ಕಳು ಲೈಂಗಿಕ ದೌರ್ಜನ್ಯಗಳಿಗೆ ತುತ್ತಾಗುತ್ತಿದ್ದಾರೆ. ಆಧುನಿಕ ಮಹಿಳೆಯು ಇಂತಹ ದೌರ್ಜನ್ಯಗಳಿಂದ ಮುಕ್ತವಾಗಿಲ್ಲ.

ಜಾಗತಿಕರಣದ ನೀತಿಗಳು ಹೇರಳ ಲಾಭಗಳಿಕೆಯ ಉದ್ದೇಶದಿಂದ ಹೆಣ್ಣನ್ನು ಸರಕನ್ನಾಗಿ ಮಾಡಿಕೊಡಿವೆ. ಅದರ ಇಂದು ಉದಾಹರಣೆ ಇಂಟರ್‌ ನೆಟ್ ಗಳಲ್ಲಿ ಹರಿದಾಡುತ್ತಿರುವ ಅಶ್ಲೀಲ ಜಾಲತಾಣಗಳು. ಇನ್ನೋಂದೆಡೆ ಹಳೆಯ ಪುರುಷ ಪ್ರಧಾನ ಮೌಲ್ಯಗಳು ಮಹಿಳೆಯ ಅಸ್ತಿತ್ವವನ್ನು ಅವಳ ಹಕ್ಕುಗಳನ್ನು ಇಂದಿಗೂ ನಿರಾಕರಿಸುತ್ತಿವೆ.ಬಂಡವಾಳಶಾಹಿ ಬಿಕ್ಕಟ್ಟಿನ ಇಂದಿನ ಪರಿಸ್ಥಿತಿಯಲ್ಲಿ ಮಹಿಳೆ ಹಲವಾರು ಆರ್ಥಿಕ ಸಂಕಷ್ಟಗಳನ್ನು ಕೂಡ ವ್ಯಾಪಕವಾಗಿ ಎದುರಿಸುತ್ತಿದ್ದಾಳೆ. ಮಹಿಳೆ ತನ್ನ ವಿಮೋಚನೆಗಾಗಿ,ಘನತೆ-ಗೌರವದ ಬದುಕಿಗಾಗಿ ಸಂಘಟಿತ ಹೋರಾಟಗಳನ್ನು ಕಟ್ಟುವ ಅವಶ್ಯಕತೆಯಿದೆ ಈ ಹಿನ್ನಲೆಯಲ್ಲಿ ಎ.ಐ.ಎಮ್.‌ಎಸ್‌.ಎಸ್‌ ನ ೭ ನೇ ರಾಜ್ಯ ಮಟ್ಟದ ಸಮ್ಮೇಳನ ನಡೆಯುತ್ತಿದೆ.ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಈಸಮ್ಮೇಳನ ಧ್ವನಿಯಾಗಲಿದೆ” ಎಂದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜೇಶ್ವರಿ ಶೆಟ್ಟರ್‌ ವಹಿಸಿದ್ದರು. ಜೊತೆಗೆ ವೇದಿಕೆಯಲ್ಲಿ ಕಾಲೇಜಿನ ಐ.ಕ್ಯು.ಎ.ಸಿ  ನ ಸಂಚಾಲರಾದ ಪ್ರೋ.ಶಾಂತಾ ಪಾಟೀಲ್ ಕುಲಕರ್ಣಿ,ವಿದ್ಯಾರ್ಥಿನಿಯರ ಒಕ್ಕೂಟದ ಸಂಚಾಲಕರಾದ ಪ್ರೋ.ಶಕುಂತಲಾ ಬಿರಾದಾರ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಅಶ್ವಿನಿ ಪಾಟೀಲ್‌,ಪ್ರಗತಿಪರ ಮಹಿಳಾ ವೇದಿಕೆಯ ಸಂಚಾಲಕರಾದ ಉಪನ್ಯಾಸಕಿ ಕುಮಾರಿ ರೇಣುಕಾ ಗೊಡಚಿ,ಎ.ಐ.ಎಮ್.ಎಸ್‌.ಎಸ್.‌ನ ಧಾರವಾಡ ಜಿಲ್ಲಾ ಕಾರ್ಯದರ್ಶಿಯಾದ ಗಂಗುಬಾಯಿ ಕೊಕರೆ,ಜಿಲ್ಲಾ ಉಪಾಧ್ಯಕ್ಷರಾದ ದೇವಮ್ಮ ದೇವತ್ಕಲ್‌ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಪ್ರಗತಿಪರ ಮಹಿಳಾ ವೇದಿಕೆಯ ಕಾರ್ಯದರ್ಶಿಯಾದ ವಿದ್ಯಾರ್ಥಿನಿ ಯಾಸ್ಮೀನ್‌ ಬಗ್ವಾನ್‌ ನಡೆಸಿಕೊಟ್ಟರು.