Spread the love

ಧಾರವಾಡ : ಪಂಚಸೇನಾ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಕೂಡಲ ಸಂಗಮ ಪೀಠದ, ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತುಂಜಯ ಸ್ವಾಮೀಜಿಗಳ ೪೫ ನೇಯ ಜನ್ಮೋತ್ಸವದ ಪ್ರಯುಕ್ತ ಧಾರವಾಡದ ಐತಿಹಾಸಿಕ ಪ್ರಸಿದ್ಧ ಕೆಲಗೇರಿಯ ದಡದಲ್ಲಿರುವ ಕಲ್ಮೇಶ್ವರ ದೇವಸ್ಥಾನದಲ್ಲಿ ಪಂಚಸೇನಾ ಜಿಲ್ಲಾಧ್ಯಕ್ಷ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸ್ವಾಮೀಜಿಗಳಿಗೆ ದೇವರು ಆರೋಗ್ಯ ಆಯುಷ್ಯ ನೆಮ್ಮದಿ ಕೊಡಲೆಂದು ಪ್ರಾರ್ಥಿಸಿ ಶ್ರೀಗಂಧದ ಸಸಿಗಳನ್ನು ನೆಟ್ಟು ಅದ್ದೂರಿಯಾಗಿ ಜನಮೋತ್ಸವವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸೇನೆಯು ಮುಖಂಡರಾದ ಮಲ್ಲಿಕಾರ್ಜುನ ಅಸುಂಡಿ,ಮಲ್ಲಿಕಾರ್ಜುನ ಮೂಲಿಮನಿ,ಅರ್ಷದ ಪಠಾಣ,ಶರಣ್ಣಪ್ಪ ಬಳೆಗೇರ, ಅನೀನ ರೂಗಿ,ರಘು ದೊಡವಾಡ, ವಿನಯ ಬೆಳ್ಳಕ್ಕಿ,ಶೇಖರಪ್ಪ ಹರಕುರ್ಣೀ,ವಿರೇಶ ಮಾನಕರ,ಬಸವರಾಜ ಕೆಲಗೇರಿ,ಸಿದ್ಧಾರ್ಥ ಸತ್ತೂರು,ಜಗದೀಶ,ಪ್ರಮೋದ,ಪ್ರಶಾಂತ ಏಣಗಿ,ಬಸವರಾಜ ತೆಜಪ್ಪನವರ,ಎ.ವಿ.ಅವ್ವಣ್ಣನವ ಹಾಗೂ ಮಹಿಳಾ ಮುಖಂಡರಾದ ಯಲ್ಲವ್ವಾ ಅವ್ವಣ್ಣನವ,ರಾಜಬೀ ಹೊಸೂರು,ಮೀನಾಕ್ಷಿ ನಿಂಬಾಳ್ಕರ,ಹಂಪಕ್ಕಾ ದ್ಯಾವಣ್ಣವರ,ಶ್ರೀದೇವಿ ಕೌಜಲಗಿ ಮುಂತಾದವರು ಉಪಸ್ಥಿತರಿದ್ದರು.