Spread the love

ಧಾರವಾಡ : ಧಾರವಾಡದ ರಂಗ ಸಂಸ್ಥೆ ಅಭಿನಯ ಭಾರತಿಯ ಆಯೋಜನೆಯಲ್ಲಿ ಶನಿವಾರ ೨೩ ರಂದು ರಂಗಾಯಣದ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿ ” ದ ಪ್ರೊಫೆಟ್‌ ಆಂಡ್‌ ದ ಪೋಯಟ್‌” ನಾಟಕ ಮೈಸೂರಿನ ಕಲಾ ಸುರುಚಿ ತಂಡದಿಂದ ಪ್ರದರ್ಶನಗೊಂಡಿತು.

ನಾಟಕದ ನಿರ್ದೇಶನ ಶಶಿಧರ ಡೋಂಗ್ರೆ, ನಿರೂಪಣೆ ಅನುರಾಧಾ ನಂದಕುಮಾರ, ಜನಾರ್ಧನ,ಸಿ.ಎಸ್‌.ಗಾಂಧಿಯಾಗಿ ಹಾಗೂ ಎ.ಕೆ.ಮೋನಪ್ಪ,ರವೀಂದ್ರನಾಥ ಟ್ಯಾಗೋರ ಪಾತ್ರದಲ್ಲಿ ಹಾಗೂ ಪ್ರದೀಪ ಕುಮಾರ ಎಮ್‌ ತಾಂತ್ರಿಕ ಹಾಗೂ ಸಂಗೀತ ಸಹಾಯಕರಾಗಿ ನಾಟಕ ವಾಚನ ತುಂಬ ಕುತೂಹಲಕಾರಿಯಾಗಿ ಪ್ರದರ್ಶನಗೊಡಿತು.