Spread the love

ಧಾರವಾಡ : ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದ ಕಟ್ಟಡ ಸಾಮಗ್ರಿಗಳ ಕುರಿತ ಎಲ್ಲಾ ಮಾಹಿತಿಯು ಒಂದೇ ಸೂರಿನಲ್ಲಿ ಸಿಗುವಂತೆ ಮಾಡಿರುವ ಅಸೋಸಿಯೇಷನ್ಠ ಆಫ್ ಕೌನ್ಸಿಲಿಂಗ್ ಸಿವಿಲ್ ಇಂಜಿನಿಯರ್ಸ್ ಲೋಕಲ್ ಸೆಂಟರ್ ಧಾರವಾಡದ ಕಾರ್ಯ ಪೂರ್ಣವಾಗಿದೆ ಎಂದು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರು ಹೇಳಿದರು.

ಅವರು ಅಸೋಸಿಯೇಷನ್ ಆಫ್ ಕೌನ್ಸಿಲಿಂಗ್ ಸಿವಿಲ್ ಇಂಜಿನಿಯರ್ಸ್ ಲೋಕಲ್ ಸೆಂಟರ್ ಧಾರವಾಡ ಮತ್ತು ಡಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಡಿ ಎಲ್ ಸಿ ಆಶ್ರಯದಲ್ಲಿ ಕಲಾಭವನದ ಅವರಣದಲ್ಲಿ ಹಮ್ಮಿಕೊಂಡ ಕಟ್ಟಡ ಸಾಮಗ್ರಿಗಳ ಪ್ರದರ್ಶನ ಬಿಲ್ಡ್ ಎಕ್ಸ್ಪೋ 2023ರ ಮಳಿಗೆಯ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ರಾಜ್ಯಮಟ್ಟದ ಪ್ರದರ್ಶನ ಹಮ್ಮಿಕೊಳ್ಳಿ ಅದಕ್ಕೆ ಬೇಕಾದ ಸಹಾಯ ಸಹಕಾರವನ್ನು ನಮ್ಮ ಸರ್ಕಾರ ನೀಡಲಿದೆ ಎಂದು ಹೇಳಿದರು.

ಶಾಸಕರಾದ ಅರವಿಂದ್ ಬೆಲ್ಲ ರವರು ಬಿಲ್ಡ್ ಎಸ್ಪೋ 2023 ರನ್ನು ಉದ್ಘಾಟನೆ ಮಾಡಿ ಮಾತನಾಡುತ್ತಾ ಧಾರವಾಡ ನಗರದ ಅಂದವನ್ನು ಹೆಚ್ಚಿಸುತ್ತಾ ಎಲ್ಲಾ ರೀತಿಯ ಪ್ರದರ್ಶನ ಸಂಕೀರ್ಣವನ್ನ ನಿರ್ಮಿಸುವ ಕಾರ್ಯವನ್ನು ನಿಮ್ಮೆಲ್ಲರ ಸಹಕಾರದಿಂದ ಮಾಡಲು ಪ್ರಯತ್ನಿಸುವೆ ಕಟ್ಟಡದ ಸೌಂದರ್ಯವು ವಾಸ್ತುಶಿಲ್ಪದ ಅಂಶಗಳು ಸಾಂಸ್ಕೃತಿಕ ಸಂದರ್ಭ ವೈಯಕ್ತಿಕ ಆದ್ಯತೆಗಳು ಮತ್ತು ಸಾಮಾಜಿಕ ಪ್ರವೃತ್ತಿಗಳ ಸಂಯೋಜನೆಯಿಂದ ಪ್ರಭಾವಿತವಾದ ಸಂಕೀರ್ಣ ಮತ್ತು ವ್ಯಕ್ತಿನಿಷ್ಠ ಪರಿಕಲ್ಪನೆಯಾಗಿದೆ. ವಿಭಿನ್ನ ಜನರು ವಿವಿಧ ವಾಸ್ತುಶಿಲ್ಪದ ಶೈಲಿಗಳು ಮತ್ತು ವೈಶಿಷ್ಟಗಳಲ್ಲಿ ಸೌಂದರ್ಯವನ್ನು ಕಂಡುಕೊಳ್ಳಬಹುದು. ಮತ್ತು ಕಟ್ಟಡವು ಅದನ್ನ ಅನುಭವಿಸುವವರಿಗೆ ಹೇಗೆ ಪ್ರತಿಧ್ವನಿಸುತ್ತದೆ ಎಂಬುದು ಮುಖ್ಯವಾದುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಷನ್ ಅಧ್ಯಕ್ಷರಾದ ಸುನಿಲ್ ಬಾಗೇವಾಡಿ ಅಧ್ಯಕ್ಷ ಮಾತುಗಳನ್ನಾಡಿ ಕಲಾಭವನದ ಆವರಣದ ಸ್ವಚ್ಛವಾಗಿ ಇಡಲು ಕಲಾಭವನದ ಬಳಕೆಯ ಕುರಿತು ಬೇಡಿಕೆ ಹಾಗೂ ಕಟ್ಟಡ ಸಾಮಗ್ರಿಗಳ ಪ್ರದರ್ಶನವನ್ನು ಧಾರವಾಡ ಜನತೆ ಸದುಪಯೋಗ ಮಾಡಿಕೊಳ್ಳಬೇಕೆಂದು ವಿನಂತಿಸಿದರು.

ಈ ಕಾರ್ಯಕ್ರಮದಲ್ಲಿ ಸಿದ್ದನಗೌಡ ಪಾಟೀಲ್ ಶ್ರೀ ಹರಿ ಕೆ ಹೆಚ್ ಕಬೀರ್ ನದಾಫ್ ಮುಂತಾದವರು ಇದ್ದರು.

ಬಿಲ್ಡ್ ಎಸ್ ಪೋ 2023 ಸಮಿತಿಯ ಅಧ್ಯಕ್ಷರಾದ ವಿಜಯೇಂದ್ರ ಬಿ ಪಾಟೀಲ್ ಪ್ರಸ್ತಾವಿಕವಾಗಿ ಮಾತನಾಡಿದರು ದಾಮೋದರ್ ಹೆಗಡೆ ಪ್ರಾರ್ಥಿಸಿದರು ಡಾಕ್ಟರ್ ವಿ ಎಸ್ ಹವಾಲ್ದಾರ್ ಸ್ವಾಗತಿಸಿದರು ಸಾಹಿತಿ ಮಾರ್ತಾಂಡಪ್ಪ ಕತ್ತಿ ನಿರೂಪಿಸಿದರು. ಎ ಸಿ ಸಿ ಇ ಎಲ್ ಸಿ ಕಾರ್ಯದರ್ಶಿ ಅರುಣ್ ಕುಮಾರ್ ಶೀಲವಂತ್ ವಂದಿಸಿದರು.