Spread the love

ಧಾರವಾಡ : ಕ್ರಿಸ್ಮಸ್‌ ಹಬ್ಬದ ಅಂಗವಾಗಿ ನಗರದ ಪ್ರತಿಷ್ಠಿತ ಕಿಟೆಲ್‌ ವಿಜ್ಞಾನ ಮಹಾವಿದ್ಯಾಲಯದಲ್ಲಿ ಧಾರವಾಡ-ಹುಬ್ಬಳ್ಳಿ ಅಂತರ ಕಾಲೇಜು ಆಹ್ವಾನಿತ ಮಹಿಳಾ ಥ್ರೊಬಾಲ್‌ ಚಾಂಪಿಯನ್‌ ಶಿಪ್‌ ಪಂದ್ಯಾವಳಿಯನ್ನು ಆಯೋಜಿಸಿಲಾಗಿತ್ತು.

ಪಂದ್ಯಾವಳಿಯಲ್ಲಿ ಅವಳಿ ನಗರದ ೨೦ ತಂಡಗಳ ೧೨೦ ವಿದ್ಯಾರ್ಥಿನಿಯರು ಮತ್ತು ತಂಡದ ವ್ಯವಸ್ಥಾಪಕರು ಹಾಜರಿದ್ದರು. ಪಂದ್ಯಾವಳಿಯಲ್ಲಿ ವಿದ್ಯಾರ್ಥಿನಿಯರು ಪಂದ್ಯದಲ್ಲಿ ಆಡುವ ವಿಧಾನ,ಸಮಯ ಪ್ರಜ್ಞೆ,ತಂಡಗಳ ಮನೋಭಾವ ಶಕ್ತಿ ಪ್ರದರ್ಶನವನ್ನು ನೋಡಿದಾಗ ಈ ವಿದ್ಯಾರ್ಥಿನಿಯರು ವಿಶ್ವವಿದ್ಯಾಲಯ,ರಾಜ್ಯ,ರಾಷ್ರೀಯ ಮತ್ತು ಅಂತರ ರಾಷ್ರೀಯ ಮಟ್ಟದಲ್ಲಿ ಆಡುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದು ಇವರಿಗೆ ಸರಿಯಾದ ಪ್ರೋತ್ಸಾಹ ಮತ್ತು ಬೆಂಬಲ ಸಿಕ್ಕಿದರೆ ಇವರು ಸ್ ಒಳ್ಳೆಯ ಆಟಗಾರರಾಗಿ ಹೊರಹೊಮ್ಮುತ್ತಾರೆ ಮತ್ತು ಇದರ ಜೊತೆಗೆ ಆಟ ಮತ್ತು ಪಾಠಗಳಿಗೆ ಸರಿಸಮಾನ ಪ್ರಾಮುಖ್ಯತೆಯನ್ನು ಕೊಡಬೇಕೆಂದು ಅಂತರ ರಾಷ್ರೀಯ ಥ್ರೋಬಾಲ್‌ ಕ್ರೀಡಾ ಪಟುವಾದ ಕುಮಾರಿ ಪೂರ್ಣಿಮಾ ಎಸ್.ಕೆ.ಯವರ ತಮ್ಮ ಅಥಿತಿಯ ಭಾಷಣದಲ್ಲಿ ಹೇಳಿದರು.

ಮುಖ್ಯ ಅಥಿತಿಗಳು ವಿಲ್ಸನ್‌ ಮೈಲಿಯವರು ಮಾತನಾಡಿ ಪದವಿ ಪೂರ್ವವಿದ್ಯಾರ್ಥಿಗಳಿಗೆ ಅಧಿಕೃತವಾಗಿ ಈ ಪಂದ್ಯಾವಳಿಯಲ್ಲಿ ಹೆಚ್ಚಿನ ಅವಕಾಶವಿದ್ದು ಪದವಿ ವಿದ್ಯಾರ್ಥಿಗಳು ಈ ಅವಕಾಶದಿಂದ ವಂಚಿತರಾಗಿರುತ್ತಾರೆ ಹಾಗೂ ಅಧಿಕೃತವಾಗಿ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ ಈ ಪಂದ್ಯಾವಳಿಯನ್ನು ಆಡಿಸುವ ಬಗ್ಗೆ ಪರಿಗಣಿಸಬೇಕೆಂದರು.

ಈ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಕಿಟೆಲ್‌ ವಿಜ್ಞಾನ ಮಹಾವಿದ್ಯಾಲಯ ವಿಜೇತ ತಂಡವಾಗಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಬಿ.ಪಿ ಎಡ್‌ ಮಹಾವಿದ್ಯಾಲಯವು ರನ್ನರಪ್ಪ ವಿಜೇತರಾದರು.

ಪ್ರಾಚಾರ್ಯರಾದ ಡಾ.ಆರ್‌ ಕ್ರೀಸ್ಟೋಫರ್‌,ಕ್ರೀಡಾ ಸಂಚಾಲಕರಾದಂತಹ ಸ್ನಾನಿ ಪೀಟರ್‌ ಮತ್ತು ಗಣ್ಯರಾದ ಕೆ.ಎಸ್‌ ಬಿಮನ್ನವರ್‌,ಐ.ಎಸ್.ಪೂಜಾರ,ಎಸ್.ಸಿ.ಬಗಲಿ,ಡಾ.ಎಸ್.ಹರಿಹರ,ಶ್ರೀ ಅನೂಪ ಥಿಯೋಫಿಲಸ್‌ ಸಂಘಟನಾ ಕಾರ್ಯದರ್ಶಿ ಝೇವಿಯರ್‌ ಗಾಮಾ ಮತ್ತು ರಾಯಪ್ಪ ಕಟಗಿ ಉಪಸ್ಥಿತರಿದ್ದರು.