Spread the love

 

ರೈತಾಪಿ ವರ್ಗ ಮತ್ತು ಕೃಷಿ ರಂಗದ ಸಮಗ್ರ ಅಭಿವೃದ್ಧಿಯೇ ಮೂಲ ಉದ್ದೇಶವನ್ನು ಹೊಂದಿದೆ ಎಂದು ನೂತನ ಅಧ್ಯಕ್ಷರಾದ ಶಿವಕುಮಾರ್ ಗೌಡ ಪಾಟಲ  ಅವರು ಸುದ್ದಿ ಗಾರರೂದಂದಿಗೆ ಮಾತನಾಡಿದರು.
ನಮ್ಮ ಬ್ಯಾಂಕು 23-11-1916 ರಂದು ದಿವಂಗತ ದಿವಾನ ಬಹದ್ದೂರ್ ಶಾಂತವೀರಪ್ಪ ಮೆಣಸಿನಕಾಯಿ ಹಾಗೂ ದಿವಂಗತ ರಾವ ಬಹಾದ್ದೂರ್ ರುದ್ರಗೌಡರು ಅರಟಾಳರವರ ನೇತೃತ್ವದಲ್ಲಿ ಸಹಕಾರ ತತ್ವದ ಡಿಯಲ್ಲಿ ಸ್ಥಾಪಿಸಲ್ಪಟ್ಟಿದೆ ಎಂದು ತಿಳಿಸಿದರು
ಪ್ರಸ್ತುತ ಬ್ಯಾಂಕು ಅವಿಭಜಿತ ಧಾರವಾಡ ಜಿಲ್ಲೆಯ ಗದಗ.ಹಾವೇರಿ.ಜಿಲ್ಲೆಗಳ ಒಟ್ಟು 550 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು.6 ಸಹಕಾರಿ ನೂಲಿನ ಗಿರಣಿಗಳು.3 ಎಣ್ಣೆ ಗಿರಣಿಗಳು. 3 ಸಕ್ಕರೆ ಕಾರ್ಖಾನೆಗಳು. 1463 ಇತರೆ ಸಹಕಾರಿ ಸಂಘಗಳ ಸದಸ್ಯತ್ವವನ್ನು ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ನಿಂಗನಗೌಡ ಮುದಿಗೌಡ ಮರಿಗೌಡ್ರ. ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಹೊರಕೇರಿ. ನಿರ್ದೇಶಕರಾದ ಸಿದ್ದಪ್ಪಾ ಸಪೋರಿ. ಸೇರಿದಂತೆ ಇನ್ನಿತರ ನಿರ್ದೇಶಕರು.ವ್ಯವಸ್ಥಾಪಕರಾದ ಕೆ ಮುನಿಯಪ್ಪ. ಪ್ರಧಾನ ವ್ಯವಸ್ಥಾಪಕರಾದ ಎಸ್.ವ್ಹಿ.ಹೊಗಾರ. ಕೆ.ಎಸ್ ಕಡಕೋಳ . ಉಪಸ್ಥಿತರಿದ್ದರು