Spread the love
  1. ಶಾಸಕರಾದ ವಿನಯ ಕುಲಕರ್ಣಿ

ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಅವರ ಅಭಿಮಾನಿಗಳು ಆಚರಣೆಗೆ ಮುಂದಾಗಿದ್ದು,ದುಂದು ವೆಚ್ಚದ ಬದಲು ಸುತ್ತಲಿನ ಹಳ್ಳಿಯ ಗ್ರಾಮಸ್ಥರಿಗೆ ದಿ 07 ಮಂಗಳವಾರ ದಂದು ಮುಂಜಾನೆ 9 ಗಂಟೆಇಂದ ಸಾಯಂಕಾಲ 5 ಗಂಟೆಯವರೆಗೆ,ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಒಂದೊಳ್ಳೆ ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದು,

ವಿನಯ ಕುಲಕರ್ಣಿ ಅಭಿಮಾನಿ ಬಳಗ,ವೈಶುದೀಪ ಪೌಂಡೇಶನ್ ಧಾರವಾಡ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವಾಸನ್ ಆಯ್ ಕೇರ ಸಹಯೋಗದೊಂದಿಗೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಉಪ್ಪಿನ ಬೆಟಗೇರಿ,ಪ್ರಾಥಮಿಕ ಆರೋಗ್ಯ ಕೇಂದ್ರ ಹೆಬ್ಬಳ್ಳಿ ಗ್ರಾಮ, ತಾಯಣ್ಣವರ ಕಲ್ಯಾಣ ಮಂಟಪ ಧಾರವಾಡ ಸೇರಿದಂತೆ ವಿವಿಧ ಕಡೆಗಳಲ್ಲಿ, ನುರಿತ ವೈದ್ಯರಿಂದ ಕಣ್ಣು,ಹಲ್ಲು,ಅಧಿಕ ರಕ್ತದೊತ್ತಡ(ಬಿಪಿ),ಸಕ್ಕರೆ ಕಾಯಿಲೆ(ಶುಗರ್) ,ಚರ್ಮರೋಗ ಹಾಗೂ ಜನರಲ್ ಪರೀಕ್ಷೆಯನ್ನು ಡಾ ಸಂಗಪ್ಪ ಗಾಭಿ ,ಡಾ ಗುರುಪ್ರಸಾದ ದೇಶಪಾಂಡೆ, ಡಾ ಜಗದೀಶ ನಾಯಕ,ಡಾ ಗೌರಿ ಯವರು ನಡೆಸುವರು,ಹಾಗೂ ವಿವಿಧ ಕಡೆಗಳಲ್ಲಿ ಅಭಿಮಾನಿ ಬಳಗದಿಂದ ರಕ್ತದಾನ ಶಿಭಿರ ಆಯೋಜಿಸಲಾಗಿದೆ.

ಆದ್ದರಿಂದ ಆಯಾ ಭಾಗದ

ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.

ಇನ್ನೊಂದು ವಿಶೇಷವೆಂದರೆ, ತಂಬಾಕು ಮುಕ್ತ ಧಾರವಾಡ ಮಾಡುವ ನಿಟ್ಟಿನಲ್ಲಿ ಜನ ಜಾಗೃತಿ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು,ಈ ಪಾದಯಾತ್ರೆಯಲ್ಲಿ,ಎನ್ ಎಸ್ ಐ ಯೂ,ಎನ್ ಸಿ ಸಿ,ಹಾಗೂ ಲಿಯೋ ಕ್ಲಬ್ ಸದಸ್ಯರು ಸಾರ್ವಜನಿಕರು ಭಾಗವಹಿಸವರು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಶೀವಲೀಲಾ ವಿನಯ ಕುಲಕರ್ಣಿಯವರು ನೆರವೇರಿಸಲಿದ್ದು ಕಾರಣ ಪಕ್ಷದ ಮುಖಂಡರು,ಪದಾಧಿಕಾರಿಗಳು,ಕಾರ್ಯಕರ್ತರು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು.

ಸಾಯಂಕಾಲ 4 ಗಂಟೆಗೆ ಮಾನ್ಯ ಶಾಸಕರಾದ ವಿನಯ ಕುಲಕರ್ಣಿಯವರು ಕಿತ್ತೂರಿನ ಮಿನಿ ವಿಧಾನಸೌದದ ಮುಂಭಾಗದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಸಾರ್ವಜನಿಕರಿಗೆ ಭೇಟಿ ನೀಡುವರು.ಮಾನ್ಯ ಶಾಸಕರ ಆಶಯದಂತೆ ಅಭಿಮಾನಿಗಳು ಕಾರ್ಯಕರ್ತರು ,ಹಾರ,ತುರಾಯಿ,ಶಾಲುಗಳನ್ನು ತರದೆ,ಶಾಲಾ ಮಕ್ಕಳಿಗೆ ನೋಟಬುಕ್ ಹಾಗೂ ಸರಕಾರಿ ಶಾಲೆಗಳಿಗೆ ಅನುಕೂಲವಾಗುವ ವಸ್ತುಗಳನ್ನು ತರಬೇಕೆಂದು ಪ್ರಕಟನೆಯಲ್ಲಿ ಅರವಿಂದ ಏಗನಗೌಡರ ವಿನಂತಿಸಿದ್ದಾರೆ.