Spread the love

ಧಾರವಾಡ : ಜಿಲ್ಲಾಧಿಕಾರಿಗಳು ಧಾರವಾಡ ಜಿಲ್ಲೆ ಇವರ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ ಸಿದ್ದರಾಮಯ್ಯ ಇವರಿಗೆ ಮನವಿ ಸಲ್ಲಿಸಲಾಯಿತು. ಕಾಂಗ್ರೆಸ್ ಸರ್ಕಾರದ ಧೋರಣೆಯಿಂದಾಗಿ ಜನಗಳು ಮಾತ್ರವಲ್ಲ, ಜಾನುವಾರುಗಳೂ ಸಹ ಈ ಸರ್ಕಾರಕ್ಕೆ ಶಾಪ ಹಾಕುತ್ತಿವೆ. ಈ ಸರ್ಕಾರವು ಜನರ ಕೋಪವಲ್ಲದೇ ಜಾನುವಾರುಗಳ ಶಾಪಕ್ಕೂ ಬಲಿಯಾಗಿದೆ.

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಹಾಲು ಉತ್ಪಾದಕರಿಗೆ ಪೋತ್ಸಾಹಧನವನ್ನು ನೀಡಿದ್ದರು.

ಬಿಜೆಪಿ ಆಡಳಿತದಲ್ಲಿ 26 ಲಕ್ಷ ಗ್ರಾಮೀಣ ರೈತರಿಂದ ದಿನಂಪ್ರತಿ 80 ರಿಂದ 85 ಲಕ್ಷ ಲೀ. ಹಾಲನ್ನು ಸಂಗ್ರಹಿಸಲಾಗುತ್ತಿತ್ತು.

ಸರ್ಕಾರವು ಹಾಲು ಉತ್ಪಾದಕರಿಗೆ 716 ಕೋಟಿ ಪ್ರೋತ್ಸಾಹಧನವನ್ನು ಬಾಕಿ ಉಳಿಸಿಕೊಂಡಿದೆ.

ಇದರಿಂದಾಗಿ ಕರ್ನಾಟಕದಲ್ಲಿ ಪ್ರತಿನಿತ್ಯ 10 ಲಕ್ಷ ಲೀ. ನಷ್ಟು ಹಾಲಿನ ಉತ್ಪಾದನೆಯ ಪ್ರಮಾಣ ಕುಸಿದಿದೆ.

ಈ ಸರ್ಕಾರಕ್ಕೆ ಮಾನ-ಮರ್ಯಾದೆ ಎಂದರೆ ರೈತರಿಗೆ ನೀಡಬೇಕಾದ ಬಾಕಿ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಈ ಸರ್ಕಾರ ರೈತರ ಬಾಕಿ ಉಳಿಸಿಕೊಂಡ ಪಾಪದ ಸರ್ಕಾರ ಎಂದು ಜನರು ಶಾಪ ಹಾಕುತ್ತಿದ್ದಾರೆ.

ರೈತರಿಗೆ ನೀಡಬೇಕಾದ ಹಣ ಬಿಡುಗಡೆ ಮಾಡಲು ಯೋಗ್ಯತೆ ಇಲ್ಲದ ಸರ್ಕಾರ. ಈ ಬಾಕಿ ಹಣಕ್ಕೂ ಕೂಡ ನರೇಂದ್ರ ಮೋದಿಯವರತ್ತ ಮುಖ ಮಾಡುತ್ತಿದೆ.

ಕೂಡಲೇ ಬಿಡುಗಡೆ ಮಾಡದಿದ್ದಲ್ಲಿ, ನಿಮ್ಮ ವಿರುದ್ಧ ಜನ-ಜಾನುವಾರು ಒಟ್ಟಾಗಿ ಹೋರಾಟಕ್ಕೆ ಇಳಿಯುತ್ತಾರೆ ಎಂಬ ಎಚ್ಚರಿಕೆ ಇರಲಿ.
ಈ ಸಂಧರ್ಬದಲ್ಲಿ ರೖತ ಮೂರ್ಚಾ ಜಿಲ್ಲಾಧ್ಯಕ್ಷರಾದ ಈಶ್ವರಗೌಡ ಪಾಟೀಲ್ , ಮಹಾನಗರ ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಸವರಾಜ ಬಾಳಗಿ, ಬಸವರಾಜ ಜಾಬಿನ, ವಿಜಯಾನಂದ ಶಟ್ಟಿ, ದತ್ತಮೂರ್ತಿ ಕುಲ್ಕರ್ಣಿ, ಬಸವರಾಜ ಗರಗ, ಸುರೇಶ ಬೇದರೆ, ಮೋಹನ ರಾಮದುರ್ಗ, ಮಂಜುನಾಥ ನೀರಲಕಟ್ಟಿ, ಭೊಪ್ಪಾ ದೇವಕ್ಕಿ, ಆನಂದ ಯಾವಗಲ್, ಬಸವರಾಜ ರುದ್ರಾಪುರ, ಶ್ರೀನಿವಾಸ ಕೊಟ್ಯನ, ಮಂಜುನಾಥ ರೇಣಕೆ, ಶಿವಾಜಿ ಶಿಂದೆ, ಅರುಣ ಅರಕೇರಿ, ದೇವರಾಜ ಶಾಹಪೂರ, ರಮೇಶ ದೊಡ್ಡವಾಡ, ಮಾಲತಿ ಹುಲ್ಲಿಕಟ್ಟಿ, ಜೋತಿ ಪಾಟಿಲ್, ಗೀತಾ ಪಾಟಿಲ್, ವಾಣಿಶ್ರೀ ಮೂಟೆಕರ, ಪುಷ್ಪಾ ಮಜ್ಜಗಿ, ಅಶ್ವಿನಿ ವೀರಾಪುರ, ರೇಣುಕಾ ಇರಕಲ, ಶೋಭಾ ಭೋಜಂಗನವರ, ಹಾಗು ಅನೇಕರು ಉಪಸ್ಥಿತರಿದರು.