Spread the love

ಧಾರವಾಡ : ಶ್ರಮಕ್ಕೆ ತಕ್ಕ ಪ್ರತಿಫಲ ಬರಬೇಕಾದರೆ ಪ್ರಯತ್ನ ಬಹಳ ಮುಖ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವದರಿಂದ ವ್ಯಕ್ತಿತ್ವ ಬೆಳವಣಿಗೆ ಆಗಲು ಸಾಧ್ಯ ಎಂದು ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ.ಡಿ.ಬಿ.ಕರಡೋಣಿ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ವಿಶ್ವವಿದ್ಯಾಲಯ ಅಂತರ ವಲಯ ಯುವ ಜನೋತ್ಸವದಲ್ಲಿ ಏಕಾಂಕ ನಾಟಕದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಪ್ರತಿಷ್ಠಿತ ರಂಗ ದೀಪ್ತಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.

ಪ್ರಸ್ತುತ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿಲು ಹಲವಾರು ವೇದಿಕೆಗಳಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಕಾಲೇಜಿನ ಜಿಮಖಾನಾದ ಉಪಾಧ್ಯಕ್ಷರಾದ ಡಾ.ಮಂಜುಳಾ ಚಲುವಾದಿ ಮಾತನಾಡಿ ಕರ್ನಾಟಕ ಕಾಲೇಜಿನಲ್ಲಿ ಒಂದು ಸಾಂಸ್ಕೃತಿಕ ಪರಂಪರೆ ಮೊದಲಿನಿಂದಲೂ ತನ್ನದೇ ಮಹತ್ವವನ್ನು ಪಡೆದುಕೊಂಡಿದೆ ಅದರ ಪರಂಪರೆ ಇಂದಿನ ವಿದ್ಯಾರ್ಥಿಗಳು ನಡೆಸಿಕೊಂಡು ಬರುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಕಾಲೇಜಿನ ಜಿಮಖಾನಾ ಕಾರ್ಯಧ್ಯಕ್ಷರಾದ ಡಾ.ಮಹಾದೇವಿ ಹಿರೇಮಠ ‌ಮಾತನಾಡಿ ಕರ್ನಾಟಕ ಕಾಲೇಜಿಗೆ ಬಹಳ ದಿನಗಳ ನಂತರ ನಂತರ ರಂಗ ದೀಪ್ತಿ ದೊರಕಿದ್ದು ಸಂತಸದ ವಿಷಯ ಎಂದ ಅವರು ವಿದ್ಯಾರ್ಥಿಗಳು ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯರಾಗಿರುವದು ಉತ್ತಮ ಬೆಳವಣಿಗೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ಪ್ರಭಾಕರ ಕಾಂಬಳೆ, ಡಾ.ಮಹದೇವ ಬಿಡ್ನಾಳ, ಡಾ. ಅನೀಲ‌ ಖಾತೆದಾರ, ಡಾ.ರಾಜೇಶ್, ಡಾ.ಮಂಜುನಾಥ ಅಸುಂಡಿ, ಕಚೇರಿ ಅಧಿಕ್ಷಕರಾದ ಚಿಕ್ಕಮಠ, ಸಿಬ್ಬಂದಿ ಮಂಜಾರ ಮುಲ್ಲಾ, ಪಿಂಜಾರ.ಯುವಜನೋತ್ಸವದ ಕಾರ್ಯದರ್ಶಿ ಗುರುಬಸವರಾಜಯ್ಯ ಎಂ.ಎಂ. ಇತರರು ಇದ್ದರು.

ಫೋಟೊ ಶೀರ್ಷಿಕೆ :

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ ಅಂತರ ವಲಯ ಮಟ್ಟದ ಯುವಜನೋತ್ಸವದಲ್ಲಿ ಕರ್ನಾಟಕ ಕಾಲೇಜಿನ ವಿದ್ಯಾರ್ಥಿಗಳು ಏಕಾಂಕ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಂಗದೀಪ್ತಿ ಪಡೆದುಕೊಂಡಿದೆ.
ಚಿತ್ರದಲ್ಲಿ ಡಾ.ಎಂ.ಆರ್.ಹಿರೇಮಠ,ಡಾ.ಮಂಜುಳಾ ಚಲುವಾದಿ, ಡಾ.ಡಿ.ಬಿ.ಕರಡೋಣಿ, ಎಸ್.ವಿ. ಚಿಕ್ಕಮಠ, ವಿದ್ಯಾರ್ಥಿ ಕಾರ್ಯದರ್ಶಿ ಗುರುಬಸವರಾಜಯ್ಯ ಇದ್ದಾರೆ.