Spread the love

ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಹಾಗೋ
ವಿದ್ಯಾಗಿರಿ ಪೊಲೀಸ್‌ ಠಾಣೆ, ಧಾರವಾಡ ಕುಖ್ಯಾತ ರಸ್ತೆ ಸುಲಿಗೆಕೋರರ ಬಂಧನ
ಬಂಧಿತರಿಂದ 7,58,000/- ರೂ ಮೌಲ್ಯದ 110 ಗ್ರಾಂ ತೂಕದ ಬಂಗಾರದ ಆಭರಣಗಳು, 02 ಮೋಟರ್ ಸೈಕಲ್ ಹಾಗೂ ಒಂದು ಮೊಬೈಲ್ ಫೋನು ವಶ

ಧಾರವಾಡ :
ಹುಬ್ಬಳ್ಳಿಯಿಂದ ಧಾರವಾಡಕ್ಕೆ ಜನೆವರಿ ದಿ 06 ರಂದು ರಾತ್ರಿ ವೇಳೆಯಲ್ಲಿ ಧಾರವಾಡ ಐಐಐಟಿ ಹತ್ತಿರ ರಸ್ತೆಯಲ್ಲಿ ಕಾರಿನಲ್ಲಿ ಪ್ರಯಾಣಿಸಿಕೊಂಡು ಹೊರಟಿದ್ದ ಹುಬ್ಬಳ್ಳಿಯ ನಿವಾಸಿ ಮಲ್ಲಿಕಾರ್ಜುನ ಬಡ್ಡಿ ಇವರಿದ್ದ ಕಾರನ್ನು ಮೋಟರ್ ಸೈಕಲ್ ಚಲಾಯಿಸಿಕೊಂಡು ಬಂದ ಅಪರಿಚಿತ ವ್ಯಕ್ತಿಗಳಿಬ್ಬರು ಅಡ್ಡಗಟ್ಟಿ ನಿಲ್ಲಿಸಿ ಕಾರಿನ ಡೋರ್ ಗ್ಲಾಸನ್ನು ಒಡೆದು ಅವರ ಕೊರಳಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದು, ಈ ಕೃತ್ಯದಲ್ಲಿ ಭಾಗಿಯಾಗಿದ್ದ ಕುಖ್ಯಾತ 03 ಜನ ಸುಲಿಗೆಕೋರರನ್ನು ವೈಜ್ಞಾನಿಕ ರೀತಿಯಲ್ಲಿ ಪತ್ತೆ ಮಾಡಿ ಬಂಧಿಸಿ, ಹೆಚ್ಚಿನ ವಿಚಾರಣೆಗೊಳಪಡಿಸಿದಾಗ
ಬಾಬಾ ಜಾನ್ ಮುಜಾವರ್
ನಾಗರಾಜ್ ಕನ್ನೇಶ್ವರ
ವಿಶಾಲ್ ಭಜಂತ್ರಿ
ಆರೋಪಿತರು ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಎಸಗಿದ ಇನ್ನೊಂದು ಪ್ರಕರಣ, ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯ 02, ಹಳೇಹುಬ್ಬಳ್ಳಿ ಹಾಗೂ ಗೋಕುಲರೋಡ ಪೊಲೀಸ್ ಠಾಣೆಯ ವ್ಯಾಪ್ತಿಯ ತಲಾ 01 ಪ್ರಕರಣ ಸೇರಿಒಟ್ಟು 06 ಪ್ರಕರಣಗಳನ್ನು ಭೇಧಿಸಿದ್ದು, ಆರೋಪಿತರಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನದ ಆಭರಣ, ಮೊಬೈಲ್ ಫೋನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ 02 ಮೋಟರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಧಾರವಾಡ ವಿದ್ಯಾಗಿರಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಈ ಪ್ರಕರಣವನ್ನು ಪತ್ತೆ ಮಾಡಲು ಹು-ಧಾ ನಗರ ಕಾ ವ ಸು ವಿಭಾಗದ ಉಪ-ಪೋಲೀಸ್ ಆಯುಕ್ತರು ಶ್ರೀ ರಾಜೀವ, ಎಂ (ಐ.ಪಿ.ಎಸ್) ರವರು ಹಾಗೂ ಹು-ಧಾ ನಗರಅಪರಾಧ ವಿಭಾಗದ ಉಪ-ಪೋಲೀಸ್‌ ಆಯುಕ್ತರು ರವೀಶ ಸಿ. ಆರ್ ರವರ ಆದೇಶದ ಮೇರೆಗೆ ಧಾರವಾಡ ಶಹರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಪ್ರಶಾಂತ ಸಿದ್ದನಗೌಡರ ಇವರ ಮಾರ್ಗದರ್ಶನದಲ್ಲಿ ವಿದ್ಯಾಗಿರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಸಂಗಮೇಶ ದಿಡಿಗಿನಾಳ ಇವರ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದು, ತಂಡದಲ್ಲಿ ಪಿ.ಎಸ್.ಐ ರವರಾದ ಬಾಬಾ. ಎಂ, ಪ್ರಮೋದ. ಎಚ್.ಜಿ, ಮನೋಹರ ಮಲ್ಲಿಗವಾಡ ಹಾಗೂ ಎ.ಎಸ್.ಐ, ಐ. ಐ. ಮದರಖಂಡಿ, ಬಸವರಾಜ ಸವಣೂರ ಮತ್ತು ಸಿಬ್ಬಂದಿ ಜನರಾದ ಎಂ. ಸಿ. ಮಂಕಣಿ, ವಿ. ಐ. ಚವರಡ್ಡಿ, ಬಾಬು ದುಮ್ಮಾಳ, ಗಿರೀಶ ಬಿದರಳ್ಳಿ, ಆನಂದ ಬಡಿಗೇರ, ಲಕ್ಷ್ಮಣ ಲಮಾಣಿ, ಬಿ. ಎಂ.ಪಟಾತ, ಮಹಾಂತೇಶ. ವಾಯ್.ಎಂ ಇವರು ಕಾರ್ಯನಿರ್ವಹಿಸಿದ್ದು ಇರುತ್ತದೆ.

ಆರೋಪಿತರ ಪತ್ತೆ ಕಾರ್ಯವನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ ರವರಾದ ಶ್ರೀಮತಿ ರೇಣುಕಾ ಸುಕುಮಾರ, ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.