Spread the love

ಗರಗ ಮಠದಿಂದ ಉಳವಿಗೆ 7ನೇ ಪಾದಯ

ಧಾರವಾಡ ತಾಲೂಕಿನ ಗರಗ ಗ್ರಾಮದ ಮಡಿವಾಳೇಶ್ವರ ಮಠದಿಂದ ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ 7ನೇ ವರ್ಷದ ಪಾದಯಾತ್ರೆಯು ಗುರುವಾರ ಗರಗ ಮಠದಿಂದ ಪಾದಯಾತ್ರೆಯನ್ನು ಪ್ರಾರಂಬಿಸಿದರು.

ಸುಪ್ರಸಿದ್ಧ ಗರಗ ಗ್ರಾಮದ ಮಡಿವಾಳೇಶ್ವರ ಕಲ್ಮಠದ ಉತ್ತರಾಧಿಕಾರಿ ಪ್ರಶಾಂತ್ ದೇವರು. ಗರಗ ಮಡಿವಾಳೇಶ್ವರ ಕಲ್ಮಠದ ಶಾಖಾ ಮಠಗಳಾದ ಹೊಸೂರ ಮಠದ ಗಂಗಾಧರ ಸ್ವಾಮೀಜಿ,ದೇವರ ಶೀಗನಳ್ಳಿಯ ವೀರೇಶ್ವರ ಸ್ವಾಮೀಜಿ,ನಿಚ್ಚನಿಕಿಯ ಪಂಚಾಕ್ಷರಿ ಸ್ವಾಮೀಜಿ,ನರೇಂದ್ರ ಮಳೇಪ್ಪಜ್ಜನ ಮಠದ ಸಂಗಮೇಶ್ವರ ಸ್ವಾಮೀಜಿ,ಗರಗ ಕುಮಾರೇಶ್ವರ ಮಠದ ಕುಮಾರ್ ದೇವರು,ಮಾಜಿ ಶಾಸಕ ಅಮೃತ ದೇಸಾಯಿ,ಸಮಾಜ ಸೇವಕಿ ಪ್ರೀಯಾ ದೇಸಾಯಿ,ಗರಗ ಗುರು ಮಡಿವಾಳೇಶ್ವರ ಕಲ್ಮಠದ ಕಾರ್ಯಾಧ್ಯಕ್ಷರಾದ ಅಶೋಕ್ ದೇಸಾಯಿ ಇವರ ನೇತೃತ್ವದಲ್ಲಿ ಐದು ದಿನಗಳ ಪಾದಯಾತ್ರೆಗೆ ಚಾಲನೆ ನೀಡಿದರು.ಸಾವಿರಾರು ಭಕ್ತರು ಭಾಗವಹಿಸಿದ್ದರು.

ಸಂಗನಗೌಡ ರಾಮನಗೌಡರ ಶಶಿಮೌಳಿ ಕುಲಕರ್ಣಿ,ಮಡಿವಾಳಪ್ಪ ಪೇಂಡಾರಿಕಿರಣ ಬುಲಬುಲಿ,ಗರಗ,ಹಂಗರಕಿ,ಲೋಕೋರ,ಮಂಗಳಗಟ್ಟಿ ಸೇರಿದಂತೆ ಸುತ್ತಲಿನ ಗ್ರಾಮದ ಭಕ್ತರು ಭಾಗವಹಿಸಿದ್ದರು.