Spread the love

ಧಾರವಾಡ: ಶಹರದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರರ ರವರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕುಂದು ಕೊರತೆಗಳ ಸಭೆಯನ್ನು ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದು ಸ್ಥಳೀಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ನಾಗರಿಕರ ಕುಂದು ಕೊರತೆಗಳ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಯಿತು.
ಅದರಂತೆ ಭಾರತರತ್ನ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಲಿಡ್ಕರ್ ಹಿತ ಅಭಿವೃದ್ಧಿ ಸಂಘದ ವತಿಯಿಂದ ಅಶೋಕ ಭಂಡಾರಿಗೆ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು ಮನವಿಯಲ್ಲಿ ವಿವರಿಸಿದ ವಿಷಯ
ಧಾರವಾಡ ಶಹರದ ಜುಬ್ಲಿ ಸರ್ಕಲ್ ದಿಂದ ಸತ್ತೂರು ವರಿಗೆ ಈ ಮೊದಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನಾಮಫಲಕಗಳು ಅಳವಡಿಸಲಾಗಿತ್ತು ಅದನ್ನು ಬಿ ಆರ್ ಟಿ ಎಸ್ ಸಂಸ್ಥೆಯ ರಸ್ತೆ ಅಗಲೀಕರಣ ನೆಪದಲ್ಲಿ ಪಾಲಿಕೆಯ ಸಹಕಾರದಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ನಾಮ ಫಲಕಗಳನ್ನು ತರವುಗಳಿಸಿದ್ದು ಅವುಗಳನ್ನು ಮರಳಿ ಸ್ಥಾಪಿಸುವ ಬಗ್ಗೆ ಮಂಡಿಸಲಾಯಿತು
ಈ ಹಿಂದೆ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಧಾರವಾಡಕ್ಕೆ ಆಗಮಿಸಿ ಮಚಿಗಾರ ಕೋ ಆಪರೇಟಿವ್ ಸೊಸೈಟಿಯನ್ನು ಅಮೃತ ಹಸ್ತದಿಂದ ಉದ್ಘಾಟಿಸಿದ್ದು ಅದು ಈಗ ಸೊಸೈಟಿ ಆಡಳಿತ ಮಂಡಳಿಯಿಂದ ತೀವೃ ಅದೋಗತಿ ಆಗಿರೋ ಕುರಿತು ಹಾಗೂ ಚರ್ಮ ಗಾರಿಕೆ ಯಲ್ಲಿ ತೊಡಗಿರುವ ಸಮುದಾಯದವರಿಗೆ ಸೊಸೈಟಿಯಲ್ಲಿ ಸದಸ್ಯತ್ವ ಮಾಡುವ ಕುರಿತು ಸೊಸೈಟಿ ಅಭಿವೃದ್ಧಿ ಕುರಿತು ವಿಷಯ ಮಂಡಿಸಲಾಯಿತು. ಧಾರವಾಡ ನಗರದಲ್ಲಿ ಈ ಹಿಂದೆ ಮಹಾನಗರ ಪಾಲಿಕೆಯಿಂದ ಶರತಬದ್ಧವಾಗಿ ಚರ್ಮಗಾರಿಕೆಯಲ್ಲಿ ತೊಡಗಿರುವ ಸಮಗಾರ ಸಮುದಾಯದವರಿಗೆ ಮಳಿಗೆಗಳನ್ನು ನೀಡಿದ್ದು ಅವುಗಳು ಅನ್ಯಸಮಾಜದವರು ದುರ್ಬಳಕೆ ಮಾಡಿಕೊಂಡಿದ್ದು ಈ ಬಗ್ಗೆ ಮಹಾನಗರ ಪಾಲಿಕೆಯಿಂದ ಅಗತ್ಯ ಕ್ರಮ ಕೈಗೊಳ್ಳಲು ಮಂಡಿಸಲಾಯಿತು.
ಈ ಎಲ್ಲಾ ವಿಷಯಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಕಾನೂನು ಪ್ರಕಾರ ಅಧಿಕಾರಿಗಳ ಮೇಲೆ ಕ್ರಮ ಜರುಗಿಸವಂತೆ ಆಗ್ರಹಿಸಿ ಮನವಿಯನ್ನು ಸಲ್ಲಿಸಲಾಯಿತು.