Spread the love

                                                 
ಕವಿ, ಕವಿಗಳಲ್ಲಿ ದಾಸರೆಂಬ ಹೆಗ್ಗಳಿಕೆಗೆ ಪಾತ್ರರಾದವರು ಕನಕದಾಸರು. ಇವರು ಕನ್ನಡ ಹರಿದಾಸ ಪರಂಪರೆಯಲ್ಲಿ ದಿಟ್ಟ ಹೆಜ್ಜೆ ಇಟ್ಟವರು. ಕೀರ್ತನೆ, ಮುಂಡಿಗೆ, ಉಗಾಭೋಗ, ಸುಳಾದಿ, ದಂಡಕಗಳು ಮಾತ್ರವಲ್ಲದೇ, ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ ಎಂಬ ಕಾವ್ಯಗಳ ಮೂಲಕ ಜೀವನಪರ ಸಂದೇಶ, ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವಂಥ ಉಪದೇಶಗಳನ್ನು ನೀಡಿದ್ದಾರೆ ಎಂದು ಬಸವರಾಜ ದೇವರು ಹೇಳಿದರು.
ಅವರು ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ವೇದಿಕೆಯಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಯಲ್ಲಮ್ಮ ನಾಯ್ಕರ.ಕುರುಬರ ಸಂಘದ ನಿರ್ದೇಶಕರಾದ ದೇವರಾಜ್ ಕಂಬಳಿ.ರಾಜೀಶ್ವರಿ ಸಾಲಗಟ್ಟಿ.ವಿಶೇಷ ಉಪನ್ಯಾಸಕರಾದ ಡಾಕ್ಟರ್ ಲೋಹಿತ್ ನಾಯ್ಕರ. ಜಿಲ್ಲಾ ಅಧಿಕಾರಿ ಗೀತಾ ಸಹಾಯಕ ನಿರ್ದೇಶಕರಾದ ಕುಮಾರ್ ಬೆಕ್ಕೇರಿ. ಕಾರ್ಯ ಕ್ರಮ ನಿರೂಪಕರಾದ ಬಸವರಾಜ ಕುಪ್ಪಸಗೌಡ್ರ ಕನಕದಾಸರ ಅಭಿಮಾನಿಗಳು ಭಾಗವಹಿಸಿದ್ದರು