Spread the love

ಧಾರವಾಡ : ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಕೆಳಗಿಳಿಸಿ ಧ್ವಜಸ್ಥಂಭ ತೆರವುಗೊಳಿಸಿದನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ – ಧಾರವಾಡ ಮಹಾನಗರ ಜಿಲ್ಲೆ ಘಟಕದವರು ಇಂದು ಜಿಲ್ಲಾಧಿಕಾರಿ ಕಚೇರಿಯ ಎದುರಿಗೆ ಪ್ರತಿಭಟನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿ ಜಿಲ್ಲಾಧಿಕಾರಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಅಪಿ೯ಸಿದರು.

ಮಂಡ್ಯದ ಕೆರಗೋಡುನಲ್ಲಿ ಹನುಮಧ್ವಜ ಕೆಳಗಿಳಿಸಿ , ಧ್ವಜಸ್ತಂಭ ತೆರವುಗೊಳಿಸಿದ ರಾಜ್ಯ ಕಾಂಗ್ರೆಸ್‌ ಸರ್ಕಾರದ ಧೋರಣೆ ಖಂಡನೀಯ ಮತ್ತು ರಾಜ್ಯ ವಿಧಾನ ಸಭಾ ವಿರೋಧ ಪಕ್ಷದ ನಾಯಕ ಆರ್ ಅಶೋಕ್ , ಮಾಜಿ ಸಚಿವರಾದ ಅಶ್ವತ್‌ ನಾರಾಯಣ ಮತ್ತು ಆನೇಕರನ್ನು ಬಂದಿಸಿದ್ದು ಖಂಡನಿಯ ಸ್ಥಳೀಯ ಗ್ರಾಮ ಪಂಚಾಯಿತಿ ಸರ್ವ ಪಕ್ಷಗಳ ಸದಸ್ಯರು ಕರಗೋಡು ಗ್ರಾಮದಲ್ಲಿ ಸುಮಾರು 40 ವರ್ಷಗಳಿಂದ ಈ ಸ್ಥಳದಲ್ಲಿ ಹನುಮನ ಧ್ವಜ ಹಾರಿಸುತ್ತಿದ್ದು , ಅದನ್ನು ಇಲ್ಲಿಯ ವರೆಗೆ ಯಾರು ಪ್ರಶ್ನೆ ಮಾಡಿರುವುದಿಲ್ಲ . ಆದರು ಸಹ ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರು ಸೇರಿ ಪಿಡಿಓ ಅವರ ಸಂಮುಖದಲ್ಲಿ ಠರಾವು ಮಾಡಿ ಗಣತಂತ್ರ ದಿನವಾದ ಜನವರಿ 26 ಮತ್ತು ಸ್ವಾತಂತ್ರೋತ್ಸವದ ದಿನ ದಂದು ರಾಷ್ಟ್ರಧ್ವಜ ಹಾರಿಸಿ ನಂತರದ ದಿನಗಳ ಹನುಮಂತ ಧ್ವಜ ಹಾರಿಸಲು ಠರಾವು ಮಾಡಿದ್ದಾಗಿದೆ.

ಆದರೆ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಆದಧಿಕಾರ ದುರುಪಯೋಗ ಮಾಡಿ ಬೆಳಗಿನ ಜಾವ 3 ಗಂಟೆಗೆ ಹಿಂದುಗಳ ಭಾವನೆಗಳಿಗೆ ಧಕ್ಕೆ ತರುವಂತೆ ಹನುಮಾನ ಧ್ವಜ ತೆರವು ಗೊಳಿಸಿದ್ದು ಅಧಿಕಾರ ದುರುಪಯೋಗ ಮಾಡುತ್ತ ಹಿಟರ್ಲ ದರ್ಬಾರ್ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಧೋರಣೆಯನ್ನು ಬಿಜೆಪಿ ಖಂಡಿಸುತ್ತದೆ ರಾಜ್ಯಪಾಲರು ರಾಜ್ಯದಲ್ಲಿ ಹಿಟರ್ಲ ಧೋರಣೆ ತೋರುತ್ತಿರುವ ಕಾಂಗ್ರೆಸ್‌ ಸರ್ಕಾರದ ಮೇಲೆ ಯೋಗ್ಯ ಕ್ರಮ ಜರುಗಿಸಿ ರಾಜ್ಯದ ಹಿಂದು ಪ್ರಜೆಗಳ ಹಿತ ಕಾಪಾಡಬೇಕು . ಮತ್ತು ತೆರವು ಗೋಳಿಸಿದ ಧ್ವಜ ಸಂಭ ಮತ್ತೆ ಸ್ಥಾಪನೆ ಮಾಡಿ ಸಾರ್ವಜನಿಕರಿಗು ಅಧ ಅವಮಾನಕ್ಕೆ ನ್ಯಾಯ ಒದಗಿಸಲು ಭಾರತೀಯ ಜನತಾ ಪಾರ್ಟಿ ಒತ್ತಾಯಿಸಿದೆ.

ಪ್ರತಿಭಟನೆಯಲ್ಲಿ ಸಂಜಯ ಕಪಟಕರ, ವಿಜಯಾನಂದ ಶೆಟ್ಟಿ, ಬಸವರಾಜ ಗರಗ, ಮೋಹನ ರಾಮದುರ್ಗ, ಅಮಿತ್ ಪಾಟೀಲ್, ಆನಂದ ಯಾವಗಲ್, ವಿಷ್ಣು ಕೊರಳಲ್ಲಿ, ಮಂಜುನಾಥ ಬಟ್ಟಣ್ಣವರ, ಶ್ರೀನಿವಾಸ ಕೋಟ್ಯಾನ್, ವೀರೇಶ ಮದನ್ನೂರ, ರಾಮಚಂದ್ರ ಪೋದಡ್ಡಿ , ಪ್ರಮೂದ ಕಾರಕುನ, ಶಕ್ತಿ ಹೀರೆಮಠ, ರಾಕೇಶ ನಾಝರೆ, ಪವನ್ ತೀಟೆ, ಪ್ರಮೂದ ಬಾಗಿಲದ, ದೇವೇಂದ್ರ ಶಾಹಪುರ,ರಮೇಶ್ ದೊಡ್ಡವಾಡ,ಹಾಗು ರಾಜೇಶ್ವರಿ ಸಾಲಗಟ್ಟಿ, ಪುಷ್ಪಾ ಮಜ್ಜಗಿ, ಜೋತಿ ಪಾಟಿಲ, ಚಂದ್ರಕಲಾ ಕೊಟ್ಟಬಾಗಿ, ನಿಲಂ ಅರವಾಳದ, ಸುವರ್ಣಾ ವಾಲಿ, ಶೋಭಾ ಭುಜಂಗನವರ, ಅಶ್ವಿನಿ ವೀರಾಪುರ ಹಾಗು ಅನೇಕರು ಉಪಸ್ಥಿತರಿದ್ದರು.