Spread the love

ಹುಬ್ಬಳ್ಳಿ : ಉಣಕಲ್ಲನಲ್ಲಿ ಸದ್ಗುರು ಶ್ರೀ ಸಿದ್ದೇಶ್ವರ ಸ್ವಾಮಿಗಳ ೧೬೪ನೇಯ ತೊಟ್ಟಿಲ ಉತ್ಸವ ಕಾರ್ಯಕ್ರಮವನ್ನು ಶ್ರೀ ಸದ್ಗುರು ಸಿದ್ದೇಶ್ವರ ಕೈಲಾಸ ಮಂಟಪ (ಹೊಸಮಠ) ಪಿ.ಬಿ. ರೋಡ, ಉಣಕಲ್ಲನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸುಳ್ಳದ ಪರಮಪೂಜ್ಯ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳು ವಹಿಸಿದ್ದರು ತಮ್ಮ ಆಶೀರ್ವಚನದಲ್ಲಿ ಹಠಯೋಗಿ ಶ್ರೀ ಸಿದ್ದಪ್ಪಜ್ಜ ಅವರ ಜೀವಿತಕಾಲದಲ್ಲಿ ಸಾಕಷ್ಟು ಪವಾಡಗಳನ್ನು ಮಾಡಿದ್ದು ಅವರಿಗೆ ಭಕ್ತಿ ಶ್ರದ್ಧೆಯಿಂದ ಯಾರು ಬಂದು ನಮಿಸುತ್ತಾರೆ ಅವರಿಗೆ ಇಲ್ಲ ಎಂದು ಹೇಳಿದರು.

ಸಿದ್ದಪ್ಪ ಜನ ಮಠ ಕಣ್ಣಿಗೆ ಕಾಣುವರೆಗೆ ಇದೆ ಉಣಕಲ್ಲದಲ್ಲಿ ಸಿದ್ದಪ್ಪಜ್ಜ ಘಟ ಒಂದು ಮಠ ಎರಡು ಎಂದು ಹೇಳಿದರು. ಉಣಕಲ್ಲ ಗ್ರಾಮಕ್ಕೆ ಉದ್ಯೋಗಕ್ಕೆ ಬಂದಂತಹ ಜನ ಅಜ್ಜನ ಆಶೀರ್ವಾದವನ್ನು ಪಡೆದು ಇಲ್ಲಿಯೇ ಸ್ವಂತ ಮನೆಯನ್ನು ಕಟ್ಟಿಕೊಂಡು ಜೀವಿಸುವುದನ್ನು ನಾನು ಕಂಡಿದ್ದೇನೆ ಎಂದರು.

ಪ್ರತಿ ವರ್ಷ ಟ್ರಸ್ಟ ಕಮಿಟಿಯ ಗೌರವಾನ್ವಿತ ಸದಸ್ಯರು ಗ್ರಾಮದ ಮುತ್ತೈದೆಯರು, ಶ್ರೀ ಸಿದ್ದೇಶ್ವರ ಸೇವಾ ಸಮಿತಿಯ ಸದಸ್ಯರು ಎಲ್ಲಾ ಸದ್ಬಕ್ತರು ಸೇರಿಕೊಂಡು ಬಹಳಷ್ಟು ವಿಜೃಂಭಣೆಯಿಂದ ಈ ಕಾರ್ಯಕ್ರಮವನ್ನು ಮಾಡುವುದು ನೋಡಿದರೆ ಇದು ಒಂದು ಮಾದರಿಯ ಕಾರ್ಯಕ್ರಮವನ್ನು ಹಾಗೂ ಬೇರೆಯವರಿಗೂ ಅನುಕರಣೆಯ ಎಂದು ನುಡಿದರು.

ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಟ್ರಸ್ಟ್‌ ಕಮಿಟಿಯ ಅಧ್ಯಕ್ಷ ರಾಜಣ್ಣ ಕೊರವಿಯವರು ಈ ದೇವಸ್ಥಾನದಲ್ಲಿ ಹಿಂದಿನಿಂದ ನಡೆದು ಬಂದ ಪರಂಪರೆಯನ್ನು ಸಭೆಗೆ ತಿಳಿಸಿ ಹೇಳಿದರು ಹಾಗೂ ವೇದಿಕೆಯ ಮೇಲೆ ಟ್ರಸ್ಟ್‌ ಕಮಿಟಿಯ ಸದಸ್ಯರಾದ ಶಿವಾಜಿ ಕನ್ನಿಕೊಪ್ಪ,ಸಿದ್ದಣ್ಣ ಬೆಂಗೇರಿ,ಅಡಿವಪ್ಪನ ಮೆಣಸಿನಕಾಯಿ,ಮಹಾದೇವಪ್ಪ ಮೆಣಸಿನಕಾಯಿ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ಮುತ್ತೈದೆಯರು ಸಿದ್ದಪ್ಪ ಜನ ಗೊಂಬೆಯನ್ನು ತೊಟ್ಟಲಲ್ಲಿ ಹಾಕಿ ಜೋಗುಳ ಹಾಡಿ ಸಿದ್ದಪ್ಪ ಜನಿಗೆ ನಾಮಕರಣ ಮಾಡಿದ ಪ್ರಸಂಗ ನಡೆಯಿತು ಅದಾದ ಮೇಲೆ ಎಲ್ಲ ಸದ್ಬಕ್ತರಿಗೆ ಪ್ರಸಾದದ ವ್ಯವಸ್ಥಯನ್ನು ಮಾಡಲಾಗಿತ್ತು.