Spread the love

ಧಾರವಾಡ ಚೇತನ ಫೌಂಡೇಶನ್‌ ಕರ್ನಾಟಕ ಇವರು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಲಕ್ಷೀಪುರ ಚೋಳನಾಯಕನಹಳ್ಳಿ ಕ್ಲಸ್ಟರ್‌ ಬೆಂಗಳೂರು ದಕ್ಷಿಣ ವಲಯದ ಈ ಶಾಲೆಯನ್ನು ಅತ್ಯುತ್ತಮ ಶಾಲೆ ಎಂದು ಗುರುತಿಸಿ, ಪ್ರಶಸ್ತಿಯನ್ನು ಡಿಸೆಂಬರ್‌ ೨೫ ರಂದು ಧಾರವಾಡದ ರಂಗಾಯಣದಲ್ಲಿ ಜರ‍್ಗಲಿರುವ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮದಲ್ಲಿ ಈ ಶಾಲೆಗೆ ಅತ್ಯುತ್ತಮ ಶಾಲೆ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಫೌಂಡೇಷನ್‌ ಅಧ್ಯಕ್ಷರಾದ ಚಂದ್ರಶೇಖರ ಮಾಡಲಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನವದೆಹಲಿಯ ಶಿಕ್ಷಕರ ಫೌಂಡೇಶನ್‌ ರಾಷ್ರೀಯ ಕಾರ್ಯಾಧ್ಯಕ್ಷರಾದ ಬಸವರಾಜ ಗುರಿಕಾರ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನಕ ಅಧ್ಯಯನ ಪೀಠದ ಸಂಯೋಜಕರಾದ ಡಾ.ಹನಮಗೌಡ ಸಿ,ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಮಂಜುನಾಥ ಅಡಿವೇರ,ಪೀರಸಾಬ ನದಾಫ,ಎಲ್.ಐ.ಲಕ್ಕಮ್ಮನವರ,ಎಚ್‌.ಜಯಲಕ್ಷೀ,ನಂದಕುಮಾರ ದ್ಯಾಪೂರ,ವಂದನಾ ಕರಾಳೆ ಮುಂತಾದವರು ಹಾಜರಿರುವರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ತೆರಿಗೆ ಅಧಿಕಾರಿ ಸುರೇಶ ಕೊರಕೊಪ್ಪ ವಹಿಸುವರು. ಲಕ್ಷೀಪುರದ ಈ ಶಾಲೆಗೆ ಐದು ಕಿಲೋಮೀಟರ್‌ ದೂರದ ತಾವರಕೆರೆಯ, ಕೇವಲ ೯ ಮಕ್ಕಳಿದ್ದ ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಪ್ರದೇಶದಿಂದ ದುಡಿಯಲು ಬಂದ ಅಲೆಮಾರಿ ಜನರ ಮತ್ತು ಕೃಷಿ ಕೂಲಿ ಕಾರ್ಮಿಕ ಮಕ್ಕಳನ್ನು ಗುರುತಿಸಿ ಈ ಶಾಲೆಗೆ ದಾಖಲು ಮಾಡಿ ೩೫ ಮಕ್ಕಳನ್ನು ಸೇರಿಸಿ ಗುಣಮಟ್ಟದ ಶಿಕ್ಷಣಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಸಮುದಾಯದ ಸಹಕಾರದಿಂದ ಆರ್‌ ಕೆ ಫೌಂಡೇಶನ್‌ ಸೇರಿದಂತೆ ದಾನಿಗಳ ಸಹಕಾರದೊಂದಿಗೆ ಶಾಲೆಯ ಸರ್ವಾಂಗೀಣ ಪ್ರಗತಿಗಾಗಿ ಈ ಶಾಲೆಯ ಮುಖ್ಯ ಶಿಕ್ಷಕಿ ಡಾ. ವೀಣಾ ತಾವರಕೆರೆ, ಆ ಮಕ್ಕಳ ಪಾಲಕರು ದುಡಿಯಲು ಹೋಗಿ ರಾತ್ರಿ ಮನೆಗೆ ಬರುತ್ತಾರೆ.

ಅಲ್ಲಿಯಾವರೆಗೆ ಆ ಮಕ್ಕಳಿಗೆ ಊಟ ಉಪಹಾರ ನೀಡಿ ಮಕ್ಕಳಿಗೆ ಶಾಲೆಯಲ್ಲಿ ನೀಡಿದ ಮನೆಪಾಠದ ಕೆಲಸವನ್ನು ಮಾಡಿಸುತ್ತಿರುವುದು ವಿಶೇಷವಾಗಿದೆ ಜೊತೆಗೆ ಬಸ್ಸಿನ ಸೌಕರ್ಯ ಇಲ್ಲದ ಈ ಊರಿಗೆ ತಮ್ಮ ಸ್ವಂತ ವಾಹನದಲ್ಲಿ ಮಕ್ಕಳಿಗೆ ಕರೆದುಕೊಂಡು ಹೋಗಿ ಪಾಠ ಮಾಡಿ ಕೆಲ ವರ್ಷಗಳ ನಂತರ ಈ ಗ್ರಾಮಕ್ಕೆ ಸಾರಿಗೆ ಇಲಾಖೆಯ ಮನವೊಲಿಸಿ ಬಸ್ಸಿನ ಸೌಕರ್ಯ ಮಾಡಿಸಿರುವುದು ಮಕ್ಕಳ ಕಲಿಕೆಗೆ ನಲಿಕಲಿ ಟೇಬಲ್‌,ಲ್ಯಾಪ್‌ ಟಾಪ್‌ ಕಲಿಕಾ ಸಾಮಗ್ರಿಗಳ ಸಂಗ್ರಹ ಈ ಒಂದು ಮಹತ್ವದ ಕಾರ್ಯ ಮಾಡಿದ ಇವರ ಅಮೋಘ ಸಾಧನೆಯನ್ನು ಗುರುತಿಸಿ ಈ ಶಾಲೆಗೆ ಅತ್ಯುತ್ತಮ ಶಾಲೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಚಂದ್ರಶೇಖರ ಮಾಡಲಗೇರಿ ತಿಳಿಸಿದರು.